ನಾಪೋಕ್ಲು ಜು.30 NEWS DESK : ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪತಿಯ ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಕ್ಲಬ್ ವತಿಯಿಂದ ಸಾಂಪ್ರದಾಯಿಕ ಕ್ರೀಡೆಗಳಾದ ಗೂಟ ಓಟ, ದಂಪತಿಗಳಿಗೆ ಹಾಳೆಎಳೆಯುವುದು, ವಯೋಮಿತಿಗೆ ತಕ್ಕಂತೆ ಓಟದ ಸ್ಪರ್ಧೆ, ಮುಂತಾದ ಮನರಂಜನಾ ಕ್ರೀಡೆಗಳು ತಳೂರು ಎಂ.ಚಂಗಪ್ಪ ಹಾಗೂ ಕುಶಾಲಪ್ಪನವರ ಗದ್ದೆಯಲ್ಲಿ ನೆರವೇರಿತು.
ಕ್ರಿಕೆಟ್ ನಲ್ಲಿ ಟೀಮ್ ಭಗವತಿ ಪ್ರಥಮ ಸ್ಥಾನ ಹಾಗೂ ಎಂಸಿಬಿ ಗೋಳಿಕಟ್ಟೆ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡವು. ಹಗ್ಗಜಗ್ಗಾಟ ಪುರುಷರ ಪಂದ್ಯಾವಳಿಯಲ್ಲಿ ಶ್ರೀ ರಾಮಭಕ್ತಾ0ಜನೇಯ “ಎ ” ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ, ಶ್ರೀ ರಾಮಭಕ್ತಾ0ಜನೇಯ “ಬಿ” ತಂಡವು ಎರಡನೇ ಸ್ಥಾನ ಪಡೆದುಕೊಂಡರು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯಲ್ಲಿ ನಾಗಶ್ರೀ ಸುಳ್ಯ ತಂಡವು ಮೊದಲನೇ ಸ್ಥಾನ ಪಡೆದುಕೊಂಡರೆ, ಮಹಾದೇವ ಸ್ಪರ‍್ಟ್ ಕ್ಲಬ್ ಬಲಮುರಿ ಎರಡನೇ ಸ್ಥಾನ ಪಡೆದುಕೊಂಡರು. 20 ತಂಡಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿ ಹಾಗೂ 7 ಮಂದಿಯನ್ನೊಳಗೊಂಡ ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಮುಕ್ತ ಓಟ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ಬೇಕೋಟ್ ಮಕ್ಕ ಕ್ಲಬ್ ನ ಅಧ್ಯಕ್ಷ ತಳೂರು ಎಸ್. ವಿವೇಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಸಭಾಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಬೆಟ್ಟಗೇರಿ ವಿ.ಎಸ್.ಎಸ್.ಎನ್ ಅಧ್ಯಕ್ಷರು ಹಾಗೂ ಸೆನೆಟ್ ಸದಸ್ಯ ತಳೂರು ಎ.ಕಿಶೋರ್ ಕುಮಾರ್, ಹಿರಿಯರಾದ ಪೊನ್ನಟ್ಟಿ ಅಕ್ಕಮ್ಮ , ಗ್ರಾ.ಪಂ ಸದಸ್ಯ ತಳೂರು ದಿನೇಶ್ ಕರು0ಬಯ್ಯ, ಕೃಷಿ ಉತ್ಪನ್ನ ಹಾಗೂ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಬೆಪ್ಪುರನ ಎಂ.ಮೇದಪ್ಪ, ಕ್ರೀಡೋತ್ಸವದ ಸ್ಥಳದಾನಿ ತಳೂರು ಎಂ.ಚಂಗಪ್ಪ ಹಾಗೂ ತಳೂರು ಎಂ.ಕುಶಾಲಪ್ಪ ಕ್ರಿಕೆಟ್ ಹಾಗೂ ಹಗ್ಗಜಗಾಟ ಪಂದ್ಯಾವಳಿಗಳ ಪ್ರಥಮ ಬಹುಮಾನದ ಟ್ರೋಫಿ ದಾನಿಗಳಾದ ತಳೂರು ತಂಬಿ ಪೂಣಚ್ಚ, ಕಡ್ಲೆರ ಎಂ.ಗಣೇಶ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಗ್ರಾಮದ ಮತ್ತಿತರ ಹಿರಿಯರು, ಕ್ರೀಡಾಭಿಮಾನಿಗಳು ಹಾಜರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ.