ಮಡಿಕೇರಿ NEWS DESK ಜು.31 : ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮದಲ್ಲಿ ಒಂಟಿ ಸಲಗವೊಂದು ಬೆಳ್ಳಂಬೆಳಗ್ಗೆ ಕಾಣಿಸಿಕೊಂಡು ಆತಂಕ ಮೂಡಿಸಿತು. ಬೆಳಿಗ್ಗೆ ಸುಮಾರು 6.30 ಗಂಟೆ ವೇಳೆಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸಿದ ಕಾಡಾನೆ ಗ್ರಾಮಸ್ಥರು ಕಿರುಚಿಕೊಂಡಾಗ ಅಕ್ಕಪಕ್ಕದ ತೋಟಗಳಿಗೆ ಪ್ರವೇಶಿಸಿತು. ಬೇಲಿ ಮತ್ತು ತೋಟದಲ್ಲಿನ ಗಿಡಗಳಿಗೆ ಹಾನಿಯಾಗಿದ್ದು, ನಿತ್ಯ ಈ ಒಂಟಿ ಸಲಗ ಗ್ರಾಮದಲ್ಲಿ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಬೆಳೆಗಾರರೊಬ್ಬರು ಒಂಟಿ ಸಲಗದ ದಾಳಿಯಿಂದ ಪಾರಾಗಿದ್ದರು. ಅರಣ್ಯ ಇಲಾಖೆ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.