ಮಡಿಕೇರಿ ಜು.31 NEWS DESK : ಪಶ್ಚಿಮ ಘಟ್ಟವೂ ಸೇರಿದಂತೆ ದೇಶಾದ್ಯಂತ ಗುಡ್ಡ ಪ್ರದೇಶಗಳ ಸಂಪೂರ್ಣ ಅಧ್ಯಯನದ ಭೂಕುಸಿತ ಒಳಗಾಗುವ ಮ್ಯಾಪಿಂಗ್ (Landslide suspectibility Mapping-LSM) ಕುರಿತಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (Geological survey of India-GSI) ಗೆ ಸರ್ಕಾರ ಹೆಚ್ಚಿನ ಹಣವನ್ನು ಮೀಸಲು ಇಟ್ಟು, ಈ ಮ್ಯಾಪ್ ಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಭೂಕುಸಿತಕ್ಕೆ ಒಳಗಾಗುವ ಮ್ಯಾಪಿಂಗ್ (LSM) ಮೆಸ್ಕೋ (mesco) (1:10,000) ಸ್ಕೇಲ್ ಮೇಲೆ ನಡಿಯುತ್ತಿರುವ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಇನ್ನಷ್ಟು ಹಣಕಾಸಿನ ನೆರವಿನ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೊಡಗಿನ ಗಾಳಿಬೀಡು-ಆಂಚಾಲ್ ಪ್ರದೇಶದ ಮ್ಯಾಪಿಂಗ್ ಸೇರಿದಂತೆ ಒಟ್ಟು 37 ಯೋಜನೆಗಳನ್ನು 2023-2024 ರಲ್ಲಿ ಕೈಗೊಂಡಿದೆ. ಆದರೆ ಈ ಯೋಜನೆಗಳು ವೇಗವಾಗಿ ಗುರಿ ಮುಟ್ಟಬೇಕಾದರೆ ಹಣಕಾಸಿನ ನೆರವು ಅಗತ್ಯವಿದೆ. ಈ ವಿಷಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಶಾಸಕರು ಹೇಳಿದರು. ಭವಿಷ್ಯದ ಸವಾಲುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನಗಳನ್ನು ನಾವು ಈ ನೆಲೆಯಲ್ಲಿ ಬಳಸಬೇಕಾದ ಅಗತ್ಯ ಬಹಳಷ್ಟು ಇದೆ ಎಂದರು.