ಮಡಿಕೇರಿ NEWS DESK ಆ.1 : ಬೆಂಗಳೂರಿನಲ್ಲಿ ನಡೆದ ಆಹ್ವಾನಿತ CBSC ಶಾಲೆಗಳ ರಾಜ್ಯಮಟ್ಟದ ರಿಂಕ್ ಹಾಕಿ ಪಂದ್ಯಾಟದ 16 ವರ್ಷ ವಯೋಮಿತಿಯೊಳಗಿನ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ *ಕೊಡಗು ವಿದ್ಯಾಲಯ* ಬಾಲಕಿಯರ ತಂಡವು ಪ್ರಥಮ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕೊಡಗು ವಿದ್ಯಾಲಯ ತಂಡದ ನಾಯಕಿ *ಜಾಸ್ಮೀನ್* ಮುಂದಾಳತ್ವದಲ್ಲಿ ಮೈದಾನಕ್ಕಿಳಿದ ಬಾಲಕಿಯರ ತಂಡವು ತಾನಾಡಿದ ಎಲ್ಲಾ ಪಂದ್ಯಾಟಗಳಲ್ಲೂ ಅಮೋಘ ಪ್ರದರ್ಶನ ನೀಡಿ ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಚಿನ್ಮಯ ವಿದ್ಯಾಲಯ ತಂಡವನ್ನು *6-3* ಗೋಲುಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿತು.ನಾಯಕ *ನಮನ್* ಮುಂದಾಳತ್ವದ ಬಾಲಕರ ತಂಡ ಲೀಗ್ ಹಂತದ ಎಲ್ಲಾ ಪಂದ್ಯಾಟಗಳಲ್ಲೂ ಉತ್ತಮ ಆಟ ಪ್ರದರ್ಶಿಸಿ ಫೈನಲ್ ಪಂದ್ಯದಲ್ಲಿ ಡಿ.ಪಿ.ಎಸ್. ಶಾಲಾ ತಂಡದ ವಿರುದ್ಧ *7-2* ಗೋಲುಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿತು.14 ರ ವಯೋಮಿತಿಯೊಳಗಿನ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಶಸ್ತಿ ಸುತ್ತಿಗೇರುವಲ್ಲಿ ವಿಫಲವಾದವು. ಕೊಡಗು ವಿದ್ಯಾಲಯ ತಂಡದ *ನೀತು ಚೌಧರಿ* ಹಾಗೂ *ನಮನ್* ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಗೆ ಭಾಜನರಾದರು.ಕೊಡಗು ವಿದ್ಯಾಲಯ ತಂಡದ ಹಾಕಿ ತರಬೇತುದಾರರಾದ *ಶ್ರೀ ದಿನೇಶ್* ರವರು ಉತ್ತಮ ಕೋಚ್ ಪ್ರಶಸ್ತಿಗೆ ಪಡೆದರು.ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ತಲಾ 11 ತಂಡಗಳು ಪಾಲ್ಗೊಂಡಿದ್ದವು. ಕೊಡಗು ವಿದ್ಯಾಲಯ ತಂಡದ ತರಬೇತುದಾರರಾದ *ಶ್ರೀ ದಿನೇಶ್ ಹಾಗೂ ಕುಮಾರಿ ಪಾರ್ವತಿ* ರವರು ಕಳೆದ ವರ್ಷ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಪಂದ್ಯಾಟಕ್ಕೆ ಕೊಡಗು ವಿದ್ಯಾಲಯ ತಂಡವನ್ನು ಉತ್ತಮವಾಗಿ ತರಬೇತುಗೊಳಿಸುವ ಮೂಲಕ ಗಮನ ಸೆಳೆದಿದ್ದರು.