ಮಡಿಕೇರಿ ಆ.1 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಮತ್ತು ಹೊರಭಾಗದ ಕೊಡವ ಸಾಂಸ್ಕೃತಿಕ ಕಲಾವಿದರುಗಳು ಹಾಗೂ ಕಲಾತಂಡಗಳಿಗೆ ಅವಕಾಶ ಕಲ್ಪಿಸಲಾಗುವುದು. ಆದ್ದರಿಂದ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್, ಕೊಂಬಾಟ್, ಕಪ್ಪೆಯಾಟ್, ಚೌರಿಯಾಟ್, ಕೋಲಾಟ್, ಪರೆಯಕಳಿ, ಉರ್‌ಟಿಕೊಟ್ಟ್ ಆಟ್, ಬಿಲ್ಲಾಟ್, ಪೀಲಿಯಾಟ್, ಕಾಪಳಕಳಿ, ಕತ್ತಿಯಾಟ್, ದುಡಿಕೊಟ್ಟ್ ಪಾಟ್, ಧೋಳ್‌ಪಾಟ್, ದೇವಡ ಪಾಟ್, ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸೇರಿದಂತೆ ಇತರ ಕಲಾವಿದರುಗಳು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ವಿವರವನ್ನು ಅಕಾಡೆಮಿ ಕಛೇರಿಗೆ ದಿನಾಂಕ 31.08.2024ರ ಒಳಗೆ ಲಿಖಿತವಾಗಿ ತಲುಪಿಸಬಹುದು. ನೋಂದಾಯಿತ ತಂಡಗಳಿಗೆ ಹಾಗೂ ಕಲಾವಿದರುಗಳಿಗೆ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ಹಾಗೂ ಸ್ಪರ್ಧೆಯ ಅನಾವರಣಕ್ಕೆ ಆದ್ಯತೆಯನ್ನು ನೀಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272-229074, 8971958996 ಸಂಪರ್ಕಿಸಬಹುದಾಗಿದೆ.