ಮಡಿಕೇರಿ ಆ.1 NEWS DESK : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಸಮಿತಿಯ ಜವಾಬ್ದಾರಿ ಈ ಬಾರಿ ಶ್ರೀ ಕೋಟೆಮಾರಿಯಮ್ಮ ದೇವಾಲಯಕ್ಕೆ ಸಿಕ್ಕಿದ್ದು, ಅಧ್ಯಕ್ಷರಾಗಿ ಜಿ.ಸಿ.ಜಗದೀಶ್ ಅಧಿಕಾರ ವಹಿಸಿಕೊಂಡರು.
ನಗರದ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಕಳೆದ ಬಾರಿಯ ಅಧ್ಯಕ್ಷ ಹೆಚ್.ಮಂಜುನಾಥ್, ಜಿ.ಸಿ.ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು, ಎಲ್ಲಾ ಮಂಟಪ ಸಮಿತಿಗಳನ್ನು ವಿಸ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ದಸರಾ ಉತ್ಸವ ಆಚರಿಸಲಾಗವುದು. ಮಂಟಪಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಹೆಚ್.ಮಂಜುನಾಥ್ ಮಾತನಾಡಿ, ಜಿಲ್ಲಾಡಳಿತ, ದಸರಾ ಸಮಿತಿ, ಶಾಸಕರ ಸಹಕಾರದಿಂದ ಕಳೆದ ಬಾರಿ ದಸರಾವನ್ನು ಉತ್ತಮವಾಗಿ ನಡೆಸಲಾಗಿದೆ ಎಂದರು. ದಸರಾ ಸಮಿತಿಯಿಂದ ದಶಮಂಟಪ ಸಮಿತಿಗೆ ಸೂಕ್ತ ಮಾನ್ಯತೆ ಸಿಗಬೇಕೆಂದರು.
ದಸರಾ ಸಮಿತಿ ಕಾಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೋಟೆ ಗಣಪತಿ ದೇವಾಲಯದ ಬಿ.ಎಂ.ರಾಜೇಶ್, ಕರವಲೆ ಭಗವತಿ ದೇವಾಲಯದ ಗಜೇಂದ್ರ, ಕೋಟೆ ಗಣಪತಿ ದೇವಾಲಯದ ವಿಕ್ಕಿ, ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜು0ಡ, ಕೋದಂಡರಾಮ ದೇವಾಲಯದ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲ್, ಮಾಜಿ ಅಧ್ಯಕ್ಷ ಗೋಪಿನಾಥ್, ದಶಮಂಟಪ ಸಮಿತಿ ಖಜಾಂಚಿ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಹಾಜರಿದ್ದರು.