ನಾಪೋಕ್ಲು ಆ.1 NEWS DESK : ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆ.4 ರಂದು ಆಟಿಡೊಂಜಿ ದಿನ -2024 ಕಾರ್ಯಕ್ರಮ ನಡೆಯಲಿದೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಹೋಬಳಿ ಮಟ್ಟದಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನ-2024 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 11 ಗಂಟೆಗೆ ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಬಿಲ್ಲವ ಸಮಾಜದ ಸಂಘದ ಉದ್ಘಾಟನೆ ನಡೆಯಲಿದ್ದು, ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಬಳಿಕ ಬಿಲ್ಲವ ಸಮಾಜದ ಮಹಾಸಭೆ ನಡೆಯಲಿದೆ ಎಂದರು.
ಮಧ್ಯಾಹ್ನ 12 ಗಂಟೆಗೆ ಆಟಿ ಮಾಸದಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ತಿನಿಸುಗಳ ಪ್ರದರ್ಶನ ಹಾಗೂ ಊಟೋಪಚಾರ ಹಮ್ಮಿಕೊಳ್ಳಲಾಗಿದೆ ಎಂದ ಅವರು ನಿರಂತರವಾಗಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದೇವೆ. ಮಧ್ಯಾಹ್ನ ಬಿಲ್ಲವ ಸಮಾಜದ ವಾರ್ಷಿಕ ಮಹಾಸಭೆ ನಡೆಯಲಿದ್ದು ಸಮಾಜ ಬಾಂಧವರಿಗಾಗಿ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ, ರಕ್ತ ನಿಧಿ ಅಧಿಕಾರಿ ಡಾ.ಕರಂಬಯ್ಯ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ,ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್. ನೋಟರಿ ವಕೀಲರಾದ ದಯಾ ಹೊನ್ನಪ್ಪ, ಮರ್ನಾಡು ಭಗವಾನ್ ಬಿಲ್ರ್ಸ್ ನ ಮಾಲೀಕ ಸುರೇಶ್ ಮುತ್ತಪ್ಪ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, 50ಕ್ಕೂ ಅಧಿಕ ಭಾರಿ ರಕ್ತದಾನ ಮಾಡಿದ ರಾಮಪ್ಪ ಪೊಲೀಸ್, ಸಿವಿಲ್ ಕಂಟ್ರಾಕ್ಟರ್ ಗೋಪಾಲ ಮರ್ನಾಡು, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ ಮರ್ನಾಡು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಕಾರ್ಯದರ್ಶಿ ರೋಹಿತ್, ಸಂಘಟನಾಕಾರ್ಯದರ್ಶಿ ಬಿ.ಎಸ್ ನಾಗರಾಜ್, ಖಜಾಂಚಿ ಬಿ.ಡಿ.ದೀಪಕ್, ಸದಸ್ಯರಾದ ಪುನೀತ್, ಸದಸ್ಯ ಬಿ.ಎಸ್.ದಿಲೀಪ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.