ಕುಶಾಲನಗರ, NEWS DESK ಆ.23 : ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ಎಸ್.ಎಸ್. ನಕುಲ್ ಅವರನ್ನು(ಶುಕ್ರವಾರ) ಆರ್ಯ ವೈಶ್ಯ ಮಂಡಳಿಯ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.

ತಾಲೂಕಿನ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಈ ಸರಳ ಸಮಾರಂಭದಲ್ಲಿ ಎಸ್.ಎಸ್. ನಕುಲ್ ಅವರು ತಮ್ಮ ಧರ್ಮಪತ್ನಿ ಪೂಜಿತಾ ಹಾಗೂ ಪೋಷಕರೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ಬಿ.ಎಲ್., ಉದಯ್ ಕುಮಾರ್, ಖಜಾಂಚಿ ಪ್ರಶಾಂತ್ ಹಾಗೂ ನಿರ್ದೇಶಕರುಗಳಾದ ಕೆ.ಜಿ. ಅಶೋಕ್, ಸತೀಶ್ ಮತ್ತು ವೈಶಾಖ್ ಉಪಸ್ಥಿತರಿದ್ದು ನಕುಲ್ ದಂಪತಿಯನ್ನು ಸನ್ಮಾನಿಸಿದರು.







