ಮಡಿಕೇರಿ ಆ.1 NEWS DESK : ಕರ್ನಾಟಕ ಟೆಕ್ವಾಂಡೊ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ಶಿಪ್ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ.
ಕೇಂದ್ರೀಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಎಂ.ವೈ.ಗೌರವ್ 2 ಚಿನ್ನ, 1ನೇ ತರಗತಿ ವಿದ್ಯಾರ್ಥಿ ಎಂ.ವೈ.ಚುನೇಹ, 5ನೇ ತರಗತಿ ವಿದ್ಯಾರ್ಥಿ ದೃಪದ್ ಪಿ.ಮನಿಕೊತ್, 4ನೇ ತರಗತಿ ವಿದ್ಯಾರ್ಥಿ ಐಡೆನ್ ಜೆ.ತರಕಾನ್, 6ನೇ ತರಗತಿ ವಿದ್ಯಾರ್ಥಿ ಗುತ್ತಿಮುಂಡನ ಸಮರ್ಥ್, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ನ 3ನೇ ತರಗತಿ ವಿದ್ಯಾರ್ಥಿ ತೇಜಸ್ ರಾಜು ವಿ. ತಲಾ 1 ಚಿನ್ನ ಹಾಗೂ 1 ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಸಂಸ್ಥೆಯ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.