ಕುಣಿಗಲ್ NEWS DESK ಆ.4 : ತಾನು ಸಾಯುವುದಾಗಿ ಸಹೋದರನಿಗೆ ವೀಡಿಯೋ ಕಳುಹಿಸಿ ದೊಡ್ಡಕೆರೆಯ ಕೋಡಿ ಹಾಲಮಡುವಿನ ನಾಲೆಯ ನೀರಿಗೆ ಹಾರಿ ಯುವಕನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಪಟ್ಟಣದ ಮಹಾವೀರ ನಗರದ ನಿವಾಸಿ ಬಿ.ಆನಂದ್ (28) ಮೃತ ಯುವಕನಾಗಿದ್ದು, ಆ.2 ರಂದು ಮನೆಯಿಂದ ಹೊರ ಹೋದವರು ಮತ್ತೆ ಮರಳಲಿಲ್ಲ ಎಂದು ತಿಳಿದು ಬಂದಿದೆ. ಆನಂದ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು “ನನ್ನ ಸಾವಿಗೆ ಯಾರು ಕಾರಣರಲ್ಲ, ನಾನು ಬದುಕಬೇಕು ಅನ್ನಿಸುತ್ತಿಲ್ಲ, ಹಾಗಾಗಿ ನಾನು ಸಾಯುತ್ತಿದ್ದೇನೆ” ಎಂದು ತನ್ನ ಸಹೋದರ ಸಾಗರ್ ಗೆ ವೀಡಿಯೋ ಮಾಡಿ ಕಳುಹಿಸಿದ್ದರು. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಲೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.