ಕುಶಾಲನಗರ ಆ.5 NEWS DESK: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಲ್ಲಿ ಹಿರಿಯ ಶ್ರೇಣಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ ಜುಲೈ ಮಾಹೆಯ ಅಂತ್ಯಕ್ಕೆ ಸೇವಾ ನಿವೃತ್ತಿ ಹೊಂದಿದ ಬಿ.ಸಿ.ಚಿನ್ನೇಗೌಡ ಅವರಿಗೆ ಡಯಟ್ ಸಂಸ್ಥೆ ಮತ್ತು ಶಿಕ್ಷಣ ಇಲಾಖೆಯ
ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ) ಹಾಗೂ
ಡಯಟ್ ಸಂಸ್ಥೆಯ ಪ್ರಾಂಶುಪಾಲ ಎಂ.ಚಂದ್ರಕಾಂತ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಿಗೊಳ್ಳುತ್ತಿರುವ ಉಪನ್ಯಾಸಕ ಚಿನ್ನೇಗೌಡ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ವಿದ್ಯಾರ್ಥಿ ವೃಂದ ಹಾಗೂ ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಚಿನ್ನೇಗೌಡ ಅವರು ಸಂಸ್ಥೆಯ ಏಳಿಗೆ ಜತೆಗೆ ಶೈಕ್ಷಣಿಕ ಪ್ರಗತಿಗೆ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿದ್ದಾರೆ. ಸದಾ ಹಸನ್ಮುಖಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಮಂಜುನಾಥ್ ಅವರು ನಿವೃತ್ತಿ ಜೀವನದಲ್ಲಿ ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಸಮಾಜಿಮುಖಿ ಕೆಲಸಗಳ ಮುಖೇನ ಕಾರ್ಯನಿರ್ವಹಿಸುವ ಮೂಲಕ ಜೀವನದಲ್ಲಿ ಉಲ್ಲಾಸಭರಿತ ಜೀವನ ನಡೆಸಲು ಸಾಧ್ಯ ಎಂದರು.
ಸನ್ಮಾನಿತರಾದ ಬಿ.ಸಿ.ಚಿನ್ನೇಗೌಡ ಮಾತನಾಡಿ, ಶಿಕ್ಷಣ ಇಲಾಖೆಯು ಅಗಾಧವಾದುದ್ದು. ಈ ಇಲಾಖೆಯಿಂದ ತಾನು ಹೆಚ್ಚು ಕಲಿಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಇಲಾಖೆಯ ಪ್ರಗತಿಗೆ ಶ್ರಮಿಸಿದ್ದು ಮತ್ತು ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ತನಗೆ ತನ್ನ ವೃತ್ತಿ ಜೀವನ ತೃಪ್ತಿ ತಂದಿದೆ. ಶೈಕ್ಷಣಿಕ ಕ್ಷೇತ್ರದ ಜ್ಞಾನ ಕೇಂದ್ರ ಎನಿಸಿದ ಕೂಡಿಗೆ ಡಯಟ್ ಸಂಸ್ಥೆಯು ಉತ್ತಮ ಶೈಕ್ಷಣಿಕ ತರಬೇತಿ ಸಂಸ್ಥೆಯಾಗಿ ನಮಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದರು.
ಹಿರಿಯ ಉಪನ್ಯಾಸಕ ಕೆ.ಎಸ್.ಶಿವಕುಮಾರ್ ಮಾತನಾಡಿ, ಮಂಜುನಾಥ್ ಅವರ ಉತ್ತಮ ನಡತೆ ಮತ್ತು ಅವರ ತ್ಯಾಗ ಗುಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದರು.
ಡಯಟ್ ನ ಉಪನ್ಯಾಸಕಿ ನಳಿನಾಕ್ಷಿ ಅವರು, ಚಿನ್ನೇಗೌಡ ಅವರ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಹಾಸನದ ಪ್ರೊ.ಶಶಿಕುಮಾರ್,
ಹಿರಿಯ ಉಪನ್ಯಾಸಕರಾದ ವೈ.ಕೆ.ತಿಮ್ಮೇಗೌಡ, ಬಿ.ಎಂ.ಗೀತಾ, ಉಪನ್ಯಾಸಕರಾದ ವಿಜಯ್,
ಎಂ.ಲತಾ, ಧನಪಾಲ್ , ಗಾಯತ್ರಿ ಇತರರು ಅನಿಸಿಕೆ ವ್ಯಕ್ತಪಡಿಸಿದರು.
ಹಿರಿಯ ಉಪನ್ಯಾಸಕರಾದ ಎಚ್.ಡಿ.ಮಂಜುನಾಥ್, ವೈ.ಕೆ.ತಿಮ್ಮೇಗೌಡ, ಬಿ.ಎಂ.ಗೀತಾ, ಉಪನ್ಯಾಸಕರಾದ ಧನಪಾಲ್, ಎಂ.ಬಿ.ಲತಾ,
ಮಾತನಾಡಿದರು. ಶಿಕ್ಷಣಾಧಿಕಾರಿಗಳಾದ ಎಸ್.ಪಿ.ಮಹಾದೇವ, ಪ್ರಕಾಶ್, ಚಿನ್ನೇಗೌಡ ಅವರ ಪತ್ನಿ ಜ್ಯೋತಿ ಇದ್ದರು. ಉಪನ್ಯಾಸಕ ಧನಪಾಲ್ ಕಾರ್ಯಕ್ರಮ ನಿರ್ವಹಿಸಿದರು.










