ಕುಶಾಲನಗರ NEWS DESK ಆ.6 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೋಮವಾರಪೇಟೆ ತಾಲ್ಲೂಕಿನ ಆಶ್ರಯದಲ್ಲಿ ಕುಶಾಲನಗರ ಸಮೀಪ ಮಾದಾಪಟ್ಟಣ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯಗಳ ಬಳಕೆ ಮಾಹಿತಿ ಕಾರ್ಯಾಗಾರ ನಡೆಯಿತು. ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಪತ್ರಕರ್ತೆ ಹಾಗೂ ನಾಟಿ ವೈದ್ಯರಾದ ವನಿತಾ ಚಂದ್ರಮೋಹನ್ ಮಾತನಾಡಿ ಪೌಷ್ಟಿಕ ಆಹಾರ ಪದ್ಧತಿ, ಪ್ರಕೃತಿದತ್ತ ಗಿಡಮೂಲಿಕೆಗಳ ಬಗ್ಗೆ ಹಾಗೂ ಅದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು. ಯೋಜನೆಯ ಕಾರ್ಯಕರ್ತರು ಸ್ವತಹ ತಯಾರಿಸಿ ತಂದ ಆಹಾರ ವಸ್ತುಗಳ ಪೌಷ್ಟಿಕತೆ ಮತ್ತಿತರ ಆರೋಗ್ಯ ವಿಷಯಗಳ ಪ್ರಾಮುಖ್ಯತೆ, ಔಷಧಿಯ ಗುಣಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕ್ಷೇತ್ರ ಯೋಜನಾಧಿಕಾರಿ ಹೆಚ್ ರೋಹಿತ್ ಮಾತನಾಡಿದರು. ಸಂಘದ ಸದಸ್ಯರು ತಾವು ತಯಾರಿಸಿದ ಪೌಷ್ಠಿಕ ಆಹಾರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಆರೋಗ್ಯ ಸುರಕ್ಷತಾ ಅಧಿಕಾರಿ ಹೆಚ್ ಕೆ ಭವಾನಿ, ಸಂಘದ ಮೇಲ್ವಿಚಾರಕರಾದ ಪೂರ್ಣಿಮಾ ಸೇವಾ ಪ್ರತಿನಿಧಿ ಜಯಲಕ್ಷ್ಮಿ ಅಂಗನವಾಡಿ ಶಿಕ್ಷಕಿ ನಾಗವೇಣಿ ಮತ್ತಿತರರು ಇದ್ದರು.