ಸುಂಟಿಕೊಪ್ಪ NEWS DESK ಆ.6: ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಹೆಚ್.ಟಿ.ಪೂವಯ್ಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿದ್ದು ಕೃಷಿ ಫಸಲನ್ನು ನಾಶ ಪಡಿಸಿ ಸುಮಾರು 1.50 ಲಕ್ಷ ಅಧಿಕ ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕಾಡಾನೆಗಳು ಈ ಭಾಗದಲ್ಲಿ ನಿರಂತರ ದಾಳಿ ಮಾಡುತ್ತಿದ್ದು ಹಗಲಿನಲ್ಲಿ ಬೇರೆಡೆ ವಾಸ್ಥವ್ಯ ಹೂಡುತ್ತಿದೆ. ರಾತ್ರಿ ವೇಳೆ ಆಗಮಿಸಿದ ಕಾಡಾನೆಗಳು ಅಡಿಕೆ, ಕಾಫಿ, ಕರಿಮೆಣಸು ಎಲ್ಲವನ್ನು ನಾಶಪಡಿಗಾಗಿದ್ದು ರೂ 1.50 ಲಕ್ಷದಷ್ಟು ಅಧಿಕ ನಷ್ಟ ಉಂಟಾಗಿದೆ ಆಳಲನ್ನು ತೋಡಿಕೊಂಡರು. ಪರಿಹಾರಕ್ಕೆ ಹಲವಾರು ಬಾರಿ ಮನವಿಸಲ್ಲಿಸಿದರೂ ಪರಿಹಾರ ಗಗನ ಕುಸುಮವಾಗಿದೆ. ಇದರಿಂದ ಕೃಷಿಯನ್ನು ನಂಬಿ ಜೀವನ ನಡೆಸುವವರಿಗೆ ಆನೆಕಾಟದಿಂದ ಮುಕ್ತಿಯಿಲ್ಲದಂತಾಗಿದೆ. ಇಲಾಖೆಯ ಅಧಿಕಾರಿಗಳು ಉಡಾಫೆ ಉತ್ತರವನ್ನು ನೀಡುತ್ತಾರೆ. ಪೊನ್ನತ್‌ಮೊಟ್ಟೆಯಿಂದ ಮೊದೂರು ಭಾಗದಲ್ಲಿ ಅಡೆತಡೆಯಿಲ್ಲದೆ ಆನೆಗಳು ಆರಾಮವಾಗಿ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿದೆ. ಈ ಭಾಗದಲ್ಲಿ ಟ್ರಂಚ್, ಸೋಲಾರ್ ಬೇಲಿ,ದುರಸ್ಥಿಗೊಂಡು ಆನೆಗಳಿಗೆ ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಆಗಮಿಸಿ ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳವಂತೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.