ಪೊನ್ನಂಪೇಟೆ NEWS DESK ಆ.8 : ಪೊನ್ನಂಪೇಟೆ ತಾಲ್ಲೂಕು ಹಳ್ಳಿಗಟ್ಟು ಗ್ರಾಮದಲ್ಲಿರುವ ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿರುವ ನಾಗಬನದಲ್ಲಿ ಆಗಸ್ಟ್ -9ರಂದು ಶುಕ್ರವಾರ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯವರೆಗೆ ವಿಶೇಷ ಪೂಜೆ ನಡೆಯಲಿದ್ದು, ಸಾಮೂಹಿಕ ಆಶ್ಲೇಷಾ ಬಲಿ ಪೂಜೆ ಹಾಗೂ ಪಂಚಾಮೃತಾಭಿಷೇಕ ಪೂಜೆ ಹಮ್ಮಿಕೊಳ್ಳಲಾಗಿದೆ. ಹಾಗೂ ಮಧ್ಯಾಹ್ನ ಅನ್ನದಾನ ವ್ಯವಸ್ಥೆಯನ್ನು ಮಾಡಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಬೇಕು ಎಂದು ಅವರು ಕೇಳಿಕೊಂಡದ್ದಾರೆ. ಆಶ್ಲೇಷಾ ಬಲಿ ಪೂಜೆಗೆ-250/ ಪಂಚಾಮೃತಾಭಿಷೇಕ ಪೂಜೆ-100/ ನಿಗದಿ ಮಾಡಿದ್ದು ಪಂಚಾಮೃತಾಭಿಷೇಕ ಮಾಡುವವರು ಶುದ್ಧ ಹಸುವಿನ ಹಾಲು ತರಕ್ಕದ್ದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ. ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಧ್ಯಕ್ಷರು-9880967573, ಮೂಕಳೇರ ರಮೇಶ್, ಗೌ ಕಾರ್ಯದರ್ಶಿ-9483815430, ಅರ್ಚಕರು – 9845308910, 9449947810










