
ಸೋಮವಾರಪೇಟೆ NEWS DESK ಆ.9 : ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗಳನ್ನು ಮಳೆಹಾನಿ ಸಂತ್ರಸ್ತರಿಗೆ ಆಹಾರ ಕಿಟ್ ಈಚೆಗೆ ವಿತರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರು ಮಳೆಯಿಂದ ಬಡವರು ಸಂಕಷ್ಟದಲ್ಲಿರುವ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಮಾಲತಿ ಅವರಿಗೆ ಮನವಿ ಸಲ್ಲಿಸಿದ ಮೇರೆಗೆ ರಾಮನಳ್ಳಿ, ಎಳೆನೀರುಗುಂಡಿ, ನಂದಿಗುಂದ, ಬೀಟಿಕಟ್ಟೆ, ಹೊನವಳ್ಳಿ, ಬೀಟಿಕಟ್ಟೆ, ಚನ್ನಾಪುರ, ಶುಂಠಿ ಗ್ರಾಮದ 27 ಕುಟುಂಬಗಳ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ಫ್ರಾನ್ಸಿಸ್ ಡಿಸೋಜ ವಿತರಿಸಿದರು.








