Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*
  • *ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*
  • *ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*
  • *ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*
  • *ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*
  • *ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*
  • *ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*
  • *ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*
  • *ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*
  • *ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ-ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯಿಂದ ಮಲ್ಲಿಕಾರ್ಜುನ ಸ್ವಾಮಿಗೆ ಸನ್ಮಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ-ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯಿಂದ ಮಲ್ಲಿಕಾರ್ಜುನ ಸ್ವಾಮಿಗೆ ಸನ್ಮಾನ*

ಜುಲೈ 22, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಜು.22 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನಗರದ ಎರಡು ಅಕಾಡೆಮಿ ಕಚೇರಿಗಳಲ್ಲಿ ಪ್ರತ್ಯೇಕವಾಗಿ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಆತ್ಮೀಯವಾಗಿ ಗೌರವಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ,  ಅಕಾಡೆಮಿ ಕಾರ್ಯಕ್ರಮಗಳು, ಪ್ರಧಾನ ಸಮಾರಂಭಗಳು, ಕಾರ್ಯಾಗಾರಗಳು ಮತ್ತಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಅಕಾಡೆಮಿ ಕಾರ್ಯ ಚಟುವಟಿಕೆ ಸುಗಮವಾಗಿ ನಡೆಸುವಲ್ಲಿ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಸದಾನಂದ ಮಾವಜಿ ಅವರು ಗುಣಗಾನ ಮಾಡಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೆರಾಲು ಅವರು ಮಾತನಾಡಿ ಬೆಂಗಳೂರು, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿಯೊಂದಿಗೆ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿದ್ದರು ಎಂದು ಸ್ಮರಿಸಿದರು. ಮತ್ತೊಬ್ಬ ಸದಸ್ಯರಾದ ತೇಜಕುಮಾರ್ ಕುಡೆಕಲ್ ಅವರು ಮಾತನಾಡಿ ಮಲ್ಲಿಕಾರ್ಜುನ ಸ್ವಾಮಿ ಅವರ ಸಮಯಪ್ರಜ್ಞೆ, ಸರಳತೆ, ಅಕಾಡೆಮಿ ಜೊತೆಗಿನ ಒಡನಾಟ, ಹಾಗೆಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿರ್ವಹಿಸಿದ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸರ್ವ ಸದಸ್ಯರ ಹಲವು ಸಭೆಯಲ್ಲಿ ಪಾಲ್ಗೊಂಡು ಸಲಹೆ ಮಾರ್ಗದರ್ಶನ ನೀಡಿದ್ದಾರೆ. ಇವರು ಅಕಾಡೆಮಿ ಚಟುವಟಿಕೆ ಸಂಬಂಧ ನೀಡಿರುವ ಸಲಹೆ ಮತ್ತು ಮಾರ್ಗದರ್ಶನದಂತೆ ನಡೆಯಲಾಗಿದೆ ಎಂದರು. ನಿವೃತ್ತ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಸುಮಾರು 29 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲಾಗಿದ್ದು, ವಿಶ್ವ ಕನ್ನಡ ಸಮ್ಮೇಳನ, ಸುವರ್ಣ ಮಹೋತ್ಸವ, ದಸರಾ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹೀಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಹಲವು ಚಟುವಟಿಕೆಗಳಲ್ಲಿ ಪಾಲ್ಗೊಂಡು ಕೆಲಸ ನಿರ್ವಹಿಸಲಾಗಿದೆ ಎಂದರು. ‘ಸರ್ಕಾರಿ ಸೇವೆಯಲ್ಲಿ ಸಣ್ಣ ಕೆಲಸಗಳು, ದೊಡ್ಡ ಗೌರವ ತರುತ್ತವೆ. ಆ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಿದರೆ ಸಾರ್ವಜನಿಕರು ಸದಾ ಸ್ಮರಿಸುತ್ತಾರೆ, ಆ ದಿಸೆಯಲ್ಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.’ ಕೊಡಗು ಜಿಲ್ಲೆ ಶ್ರೀಮಂತಿಕೆ ಪರಂಪರೆ ಮತ್ತು ಸಂಸ್ಕೃತಿ ಹೊಂದಿದ್ದು. ಅವುಗಳನ್ನು ಅಕಾಡೆಮಿ ಮೂಲಕ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ನಿರ್ಮಲ ಮಠಪತಿ ಅವರು ಮಾತನಾಡಿ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ 5 ಅಕಾಡೆಮಿಗಳು ಬರುವುದು ವಿಶೇಷವಾಗಿದೆ ಎಂದರು. ಆಯಾಯ ಪ್ರದೇಶದಲ್ಲಿನ ಸ್ಥಳೀಯ ಭಾಷೆ, ಸಂಸ್ಕೃತಿ, ಕಲೆಗಳನ್ನು ಗೌರವಿಸಬೇಕು ಎಂದು ಅವರು ಹೇಳಿದರು. ‘ಒಂದು ಚಂದದ ಹಾರ ಅನೇಕ ಹೂವುಗಳನ್ನು ಒಳಗೊಂಡಿರುತ್ತದೆ. ಆ ದಿಸೆಯಲ್ಲಿ ಒಂದು ನಾಡಿನಲ್ಲಿ ಅನೇಕ ಶ್ರೀಮಂತ ಸಂಸ್ಕೃತಿ, ಕಲೆ, ಸಾಹಿತ್ಯ, ಜಾನಪದವನ್ನು ಕಾಣಬಹುದಾಗಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ನಿರ್ಮಲ ಮಠಪತಿ ಅವರು ನುಡಿದರು.’ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್.ಕಾರ್ಯಪ್ಪ, ನಿಡ್ಯಮಲೆ ಡಾ.ಜ್ಞಾನೇಶ್, ಸೂದನ ಎಸ್.ಈರಪ್ಪ, ಲೋಕೇಶ್ ಊರುಬೈಲು. ಸಂದೀಪ್ ಪೂಳಕಂಡ, ವಿನೋದ್ ಮೂಡಗದ್ದೆ, ಮೋಹನ್ ಮೊನ್ನಚ್ಚನ, ಗೋಪಾಲ್ ಪೆರಾಜೆ, ಕುದ್ಪಾಜೆ ಕೆ.ಪ್ರಕಾಶ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಗಣೇಶ್, ಕಂಬೆಯಂಡ ಡೀನಾ ಬೋಜಣ್ಣ, ಚೆಪ್ಪುಡಿರ ಉತ್ತಪ್ಪ, ನಾಯಂದಿರ ಶಿವಾಜಿ, ಪೊನ್ನೀರ ಗಗನ್, ಪಿ.ಕೆ.ಕುಟ್ಟಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಇತರರು ಇದ್ದರು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.7 NEWS DESK : 66/11ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಮತ್ತು ಎಫ್5…

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*

ಅಕ್ಟೋಬರ್ 7, 2026

*ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*

ಅಕ್ಟೋಬರ್ 7, 2026

*ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*

ಅಕ್ಟೋಬರ್ 7, 2026

*ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*

ಅಕ್ಟೋಬರ್ 7, 2026

*ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*

ಅಕ್ಟೋಬರ್ 7, 2026

*ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*

ಅಕ್ಟೋಬರ್ 7, 2026

*ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 7, 2026

*ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ವಿದ್ಯಾರ್ಥಿಗಳ ಆಲೋಚನೆಗಳಿಗೆ ಶಕ್ತಿ: ಪ್ರೊ. ಸುರೇಶ್ ಎಂ.*

ಅಕ್ಟೋಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.