ಮಡಿಕೇರಿ ಆ.13 NEWS DESK : ಮಾದಾಪುರದ ಜಂಬೂರು ಬಾಣೆಯ ಬಡಾವಣೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರವನ್ನು ಬ್ರಿಟಿಷ್ ಹೋರಾಟದಿಂದ ಮುಕ್ತಗೊಳಿಸಲು ಸ್ವತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಬಲಿದಾನವನ್ನು ವಿವರಿಸಿದರು. ಈ ಸಂದರ್ಭ ಗ್ರಾಮಸ್ಥರು ಹಾಜರಿದ್ದರು.







