
ಮಡಿಕೇರಿ ಆ.16 NEWS DESK : ಜಿಲ್ಲೆಯ ಡಿಸಿಆರ್‍ಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್‌ಕಾನ್ಸ್‌ಟೇಬಲ್ ಸಿ.ಕೆ.ರಾಜೇಶ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕರಿಯಚ್ಚನ್ ಮತ್ತು ತೆರೆಸಾ ದಂಪತಿಯ ಪುತ್ರರಾದ ಇವರು, 2002ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಸಿಡಿಆರ್ ಘಟಕದಲ್ಲಿ ತೋರಿರುವ ತಾಂತ್ರಿಕ ಪರಿಣತಿಯನ್ನು ಆಧರಿಸಿ ಇವರಿಗೆ ಪದಕ ಘೋಷಿಸಲಾಗಿದೆ








