ಸಿದ್ದಾಪುರ ಆ.21 NEWS DESK : ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ನಿವಾಸಿ, ನಿವೃತ್ತ ಅಂಚೆ ನೌಕರ ರಾಮಚಂದ್ರ ಟಿ.ಪಿ (68) ಎಂಬುವವರು ಆ.19ರಿಂದ ಕಾಣೆಯಾಗಿದ್ದಾರೆ. ತೋಟಕ್ಕೆ ಗೊಬ್ಬರ ತರುವುದಾಗಿ ಹೇಳಿ ಹೋದವರು ಮತ್ತೆ ಮನೆಗೆ ಮರಳಲಿಲ್ಲವೆಂದು ರಾಮಚಂದ್ರ ಅವರ ಪುತ್ರಿ ಭವ್ಯ ಟಿ.ಆರ್ ದೂರಿನಲ್ಲಿ ತಿಳಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರು ಪತ್ತೆಯಾದಲ್ಲಿ 9740697432 ಈ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.









