ನಾಪೋಕ್ಲು ಆ.22 NEWS DESK : ಮಂಗಳೂರು ವಿಶ್ವವಿದ್ಯಾಲಯವು ಪದವಿ ತರಗತಿಗಳ ಫಲಿತಾಂಶ ಪ್ರಕಟಿಸಿದ್ದು,ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ಪದವಿಯ ಆರನೇ ಸೆಮಿಸ್ಟರ್ ನ ಬಿ. ಎ.ವಿಭಾಗದಲ್ಲಿ ಶೇ.100 ಮತ್ತು ಬಿ. ಕಾಂ.ವಿಭಾಗದಲ್ಲಿ ಶೇ. 85.71 ಪಡೆದಿರುತ್ತದೆ. ತರುಣ್ ಹೆಚ್ ಎನ್ ಅಂತಿಮ ಬಿ. ಕಾಂ ನಲ್ಲಿ ಶೇ.83, ರಕ್ಷಿತಾ ಬಿ ಪಿ ಅಂತಿಮ ಬಿ. ಕಾಂ ನಲ್ಲಿ ಶೇ. 80, ಜಸೀಲ ಎಂ.ಎಂ.ಅಂತಿಮ ಬಿ.ಕಾಂ ನಲ್ಲಿ ಶೇ. 77 ಅಂಕ ಗಳಿಸಿದ್ದಾರೆ. ಇರ್ಫಾನ್ ಎಂ ಐ ಅಂತಿಮ ಬಿ.ಎ ನಲ್ಲಿ ಶೇ.83, ಅಫ್ರೀನ ಎಂ ಐ ಅಂತಿಮ ಬಿ. ಎ ನಲ್ಲಿ ಶೇ.82.9 ಹಾಗೂ ಸಂಗೀತ ಎಂ ಅಂತಿಮ ಬಿ. ಎ ನಲ್ಲಿ ಶೇ.80 ಅಂಕ ಗಳಿಸಿ ಕಾಲೇಜಿಗೆ ಗೌರವವನ್ನು ತಂದಿದ್ದಾರೆ.
ವರದಿ : ದುಗ್ಗಳ ಸದಾನಂದ.