ಮಡಿಕೇರಿ NEWS DESK ಆ.20 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬ್ ದುರಂತ ನರಮೇಧದ ಸ್ಥಳದಲ್ಲಿ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ಅಗಲಿದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಮುಂದಿನ ತಮ್ಮ ಹೋರಾಟದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಕೊಡವಲ್ಯಾಂಡ್ ಮತ್ತು ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ಪೂರ್ವಜರು ಹಾಗೂ ಹಿರಿಯರನ್ನು ಸ್ಮರಿಸುವುದರೊಂದಿಗೆ ಆಶೀರ್ವಾದವನ್ನು ಕೋರಲಾಗಿದೆ ಎಂದರು. ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕು. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ನಡೆದ ಅರಮನೆ ಪಿತೂರಿಯ ಮೂಲಕ ಕೊಡವರ ರಾಜಕೀಯ ಹತ್ಯೆಗಳನ್ನು ಗುರುತಿಸಬೇಕು. ಭಾರತೀಯ ಸಂವಿಧಾನದ 49 ನೇ ವಿಧಿ ಮತ್ತು ಯುನೆಸ್ಕೋದ 1964 ರ ವೆನಿಸ್ ಚಾರ್ಟರ್ ಅಡಿಯಲ್ಲಿ ಈ ದುರಂತಗಳನ್ನು ಅಂತರರಾಷ್ಟ್ರೀಯ ಹೊಲೊಕಾಸ್ಟ್ ಸ್ಮಾರಕ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಹೊಲೊಕಾಸ್ಟ್ ಸ್ಮರಣಾರ್ಥ ಪಟ್ಟಿ ಮತ್ತು ಉಲುಗುಲಿ, ಮುಳ್ಳುಸೋಗೆ ಹಾಗೂ ಲಕ್ಡಿಕೋಟೆಯಲ್ಲಿರುವ ಕೊಡವ ಯುದ್ಧ ಕುರುಹುಗಳನ್ನು ಅಂತರರಾಷ್ಟಿçÃಯ ಯುದ್ಧ ಸ್ಮಾರಕಗಳಲ್ಲಿ ಸೇರಿಸುವ ಮೂಲಕ ಸ್ಮರಿಸಬೇಕು. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಕೊಡವರು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ‍್ಯವನ್ನು ಶಾಸನಬದ್ಧವಾಗಿ ರಕ್ಷಿಸಬೇಕು. ಈಶಾನ್ಯ ಭಾರತ, ಲೆಹ್, ಲಡಾಖ್ ಮತ್ತು ಗೂರ್ಖಾಲ್ಯಾಂಡ್ ಮಾದರಿಯಲ್ಲಿ ಕೊಡವಲ್ಯಾಂಡ್ ನ್ನು ಭಾರತೀಯ ಸಂವಿಧಾನದ 5 ನೇ ಮತ್ತು 6 ನೇ ಅನುಸೂಚಿಗಳೊಂದಿಗೆ 244 ನೇ ವಿಧಿ ಮತ್ತು 371 ನೇ ವಿಧಿಯ ಅಡಿಯಲ್ಲಿ ಸ್ವಯಂ ಆಡಳಿತದ ಭೂ-ರಾಜಕೀಯ ಸ್ವಾಯತ್ತ ಪ್ರದೇಶವಾಗಿ ತರಬೇಕು. ಕೊಡವ ಬುಡಕಟ್ಟು ಸಮುದಾಯವನ್ನು ಭಾರತೀಯ ಸಂವಿಧಾನದ ಅನುಸೂಚಿಗಳಲ್ಲಿ ಮತ್ತು ಆದಿಮಸಂಜಾತ ಜನರ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ ಘೋಷಣೆಯಡಿಯಲ್ಲಿ ಆದಿಮಸಂಜಾತ ಏಕ-ಬುಡಕಟ್ಟು ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಗುಂಪಾಗಿ ಗುರುತಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಪಟ್ಟಮಾಡ ಕುಶ, ಮಂದಪoಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್ ತಿಮ್ಮಯ್ಯ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ ಹಾಗೂ ಮಂದಪAಡ ವಿಹಾನ್ ದೇವಯ್ಯ ಹಾಜರಿದ್ದು ಪುಷ್ಪ ನಮನ ಸಲ್ಲಿಸಿದರು.








