ಮಡಿಕೇರಿ NEWS DESK ಆ.26 : ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಇಂದು ಮೈಸೂರು ಅಗ್ನಿಶಾಮಕ ದಳದ ಕೇಂದ್ರಕ್ಕೆ ಭೇಟಿ ನೀಡಿದರು. ಅಗ್ನಿಶಾಮಕ ದಳದ ತುರ್ತು ಪ್ರಕ್ರಿಯೆಗಳ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಪಾರಂಪರಿಕ ಅಗ್ನಿಶಾಮಕ ಕಟ್ಟಡದ ರಕ್ಷಣೆ ಹಾಗೂ ಅದನ್ನು ಪುನಃಸ್ಥಾಪಿಸುವ ಯೋಜನೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಎಲ್ಲರಿಗೂ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಶ್ರಮಿಸುವುದು ನಮ್ಮ ಗುರಿ ಎಂದು ಯದುವೀರ್ ತಿಳಿಸಿದರು.