ವಿರಾಜಪೇಟೆ NEWS DESK ಆ.28 : ಹುಣಸೂರು-ಕುಟ್ಟ ಮುಖ್ಯ ರಸ್ತೆಯ ನಾಗರಹೊಳೆ ಪಿಕಾಕ್ ಲೈನ್ ಬಳಿಯಲ್ಲಿ ಹುಲಿ ಕಾಣಿಸಿಕೊಂಡಿದೆ. ನಾಗರಹೊಳೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿದ್ದು, ವ್ಯಾಘ್ರ ದರ್ಶನದಿಂದ ಪುಳಕಿತಗೊಂಡರು. ಮಂಗಳವಾರ ಮಧ್ಯಾಹ್ನ ನಾಗರಹೊಳೆ ಮುಖ್ಯ ರಸ್ತೆಯ ಮೂಲಕ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಹುಲಿಯ ಫೋಟೋ ಕ್ಲಿಕ್ಕಿಸಿ, ವಿಡಿಯೋ ಚಿತ್ರೀಕರಿಸಿ ಪ್ರವಾಸಿಗರು ಖುಷಿಪಟ್ಟರು. ಹುಲಿ ಅರಣ್ಯ ಪ್ರವೇಶಿಸಿದ ನಂತರ ಪ್ರವಾಸಿಗರು ಪ್ರಯಾಣ ಮುಂದುವರೆಸಿದರು. ಮಳೆ ಬಂದ ನಂತರ ಅರಣ್ಯ ಹಸಿರಾಗಿದೆ. ಅರಣ್ಯ ವ್ಯಾಪ್ತಿ ಮಾತ್ರವಲ್ಲದೆ ಅಕ್ಕಪಕ್ಕದ ರಸ್ತೆಗಳಲ್ಲೂ ವನ್ಯಜೀವಿಗಳ ಸಂಚಾರ ಹೆಚ್ಚಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.