ಸೋಮವಾರಪೇಟೆ ಆ.28 NEWS DESK : ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶ್ವಮಾನವ ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಶ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಪುಟಾಣಿಗಳು ವಿವಿಧ ವೇಷಭೂಷಣಗಳನ್ನು ಧರಿಸಿ ಶ್ರೀಕೃಷ್ಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ರೂಪದಲ್ಲಿ ಕಂಗೊಳಿಸಿದರು. ತೀರ್ಪುಗಾರರಾಗಿ ಶಿಕ್ಷಕಿ ಸುಮತಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ನಿರ್ದೇಶಕಿ ಚಂದ್ರಿಕಾ ಕುಮಾರ್, ಮುಖ್ಯ ಶಿಕ್ಷಕಿ ಬೀನಾ, ಇಂದಿರಾ, ಅರುಣ ಸೇರಿದಂತೆ ಇತರರು ಇದ್ದರು.









