
ನಾಪೋಕ್ಲು ಆ.28 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ವಾಟೆಕಾಡು ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ವಾಟೆಕಾಡುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ವಾಟೆಕಾಡು ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರದ ಸುತ್ತಲ್ಲು ಬೆಳೆದಿದ್ದ ಗಿಡಗಂಟಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮಿತಿಯ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು. ಈ ಸಂದರ್ಭ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ಹೆಚ್.ಜೆ.ಶರಣು, ಕಾರ್ಯದರ್ಶಿ ಅಭಿ, ಹೆಚ್.ಜೆ.ಗಣೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳಾದ ಸರಸ್ವತಿ, ಸುಮ್ಮಿ, ಸೀತೆ, ರಂಜು , ರೂಪ ಮತ್ತು ಇತರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









