Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*
  • *ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*
  • *ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*
  • *ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 
  • *ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*
  • *ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 
  • *ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*
  • *ಗೋಣಿಕೊಪ್ಪಲುವಿನಲ್ಲಿ ನಗರ ಬಿಜೆಪಿ, ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ*
  • *ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಷಂಶುದ್ದೀನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಕುಶಾಲನಗರದಲ್ಲಿ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ : ವಿದ್ಯಾರ್ಥಿಗಳು ಕ್ರೀಡಾ ಸಾಧಕರ‌ ಬಗ್ಗೆ ತಿಳಿದುಕೊಳ್ಳಬೇಕು : ಡಾ.ಸದಾಶಿವಯ್ಯ ಎಸ್.ಪಲ್ಲೇದ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರದಲ್ಲಿ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ : ವಿದ್ಯಾರ್ಥಿಗಳು ಕ್ರೀಡಾ ಸಾಧಕರ‌ ಬಗ್ಗೆ ತಿಳಿದುಕೊಳ್ಳಬೇಕು : ಡಾ.ಸದಾಶಿವಯ್ಯ ಎಸ್.ಪಲ್ಲೇದ್*

ಆಗಷ್ಟ್ 29, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ, ಆ.29 NEWS DESK : ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕುಶಾಲನಗರ ಫಾತಿಮ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ  ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಕುಶಾಲನಗರ “ಬಿ” ವಲಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು. ಕುಶಾಲನಗರ ಫಾತಿಮ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲೊಂಡು ಮಾತನಾಡಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದ ಸರ್ಕಾರಿ ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಡಾ.ಸದಾಶಿವಯ್ಯ ಎಸ್.ಪಲ್ಲೇದ್ , ಪ್ರತಿ ವರ್ಷ ಆ.29 ರಂದು, ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ನೆನಪಿಗಾಗಿ ಭಾರತವು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತದೆ. ಈ ದಿನವನ್ನು ದೇಶದ ಕ್ರೀಡಾ ಸಾಧಕರು ಮತ್ತು ಚಾಂಪಿಯನ್‌ಗಳಿಗೆ ಅವರ ಕೊಡುಗೆ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರುವ ನಿಟ್ಟಿನಲ್ಲಿ ಸಮರ್ಪಿಸಲಾಗಿದೆ. ಇದು ಶಿಸ್ತು, ಪರಿಶ್ರಮ, ಕ್ರೀಡಾ ಮನೋಭಾವ ಮತ್ತು ತಂಡದ ಕೆಲಸ ಸೇರಿದಂತೆ ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ ಎಂದರು. ವಿದ್ಯಾರ್ಥಿಗಳು ಕ್ರೀಡಾ ಸಾಧಕರ‌ ಬಗ್ಗೆ ಹೆಚ್ಚಿನ ಅರಿವು ಬೆಳೆಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಹೊಂದಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ  ಎಂ.ಮಾರ್ಟಿನ್, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿ ಶಿಸ್ತು, ಸಂಯಮ, ಶ್ರದ್ಧೆ, ಪರಿಶ್ರಮ, ಪ್ರಮಾಣಿಕತೆ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿ ಯಶಸ್ಸು ಗಳಿಸಬೇಕು ಎಂದು ಕರೆ ನೀಡಿದರು. ಕ್ರೀಡಾಜ್ಯೋತಿ ಬೆಳಗಿಸಿದ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ ಮಾತನಾಡಿ, ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತವೆ ಎಂದರು. ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿ’ಸಿಲ್ವ, ಕ್ರೀಡಾಕೂಟದ ಕಾರ್ಯದರ್ಶಿ ಎ.ಎ.ಲಕ್ಷ್ಮಣ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲರಾದ ಶ್ವೇತ , ಸಿ.ಆರ್.ಪಿ. ಟಿ.ಇ.ವಿಶ್ವನಾಥ್, ಪ್ರೌಢಶಾಲಾ ಪೋಷಕರ ಪ್ರತಿನಿಧಿ ಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ದಯಾನಂದ ಪ್ರಕಾಶ್,, ಎಂ.ಎಸ್. ಮಹೇಂದ್ರ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಪತ್ರಕರ್ತರ ಸಂಘದ ಟ್ರಸ್ಟ್ ಅಧ್ಯಕ್ಷ ಎಚ್.ಎಂ.ರಘು, ಶಿರಂಗಾಲ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಶೈಲಾ, ಫಾತಿಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್, ವಿವಿಧ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಪೋಷಕರು ಇದ್ದರು. ಇದೇ ವೇಳೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಡಾ.ಸದಾಶಿವಯ್ಯ ಪಲ್ಲೇದ್, ಎ.ಎ.ಲಕ್ಷ್ಮಣ್, ಮುಖ್ಯ ಶಿಕ್ಷಕಿ ‌ಬಿ.ಎನ್.ಪುಷ್ಪ, ಸಿ.ಆರ್.ಪಿ.ಟಿ.ಇ.ವಿಶ್ವನಾಥ್, ಪೋಷಕರ ಪ್ರತಿನಿಧಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮನ್ನು ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದನ್ನು ಮುನ್ನ ಫಾತಿಮ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಹೂಪ್ಸ್ ನೃತ್ಯ ಹಾಗೂ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದವು.
ಕ್ರೀಡಾಳುಗಳ ಸಂಭ್ರಮ ::  ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಸಂಭ್ರಮದಲ್ಲಿ ಭಾಗವಹಿಸಿದ್ದ ಕ್ರೀಡಾಳುಗಳು ಮಳೆಯ ಸಿಂಚನದ ನಡುವೆ “ಬಿ” ವಲಯಮಟ್ಟದ ಕ್ರೀಡೆ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾಟಗಳು ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಪಾಲ್ಗೊಂಡು ಖುಷಿಪಟ್ಟರು. ಕ್ರೀಡಾಭಿಮಾನಿಗಳು ಮಕ್ಕಳ ಕ್ರೀಡೆಗಳಿಗೆ ಹುರಿದುಂಬಿಸುತ್ತಿದ್ದು ಕಂಡುಬಂತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 4, 2026

*ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*

ಮೇ 4, 2026

*ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*

ಮೇ 4, 2026

*ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*

ಮೇ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 4 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಡಿ…

*ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*

ಮೇ 4, 2026

*ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*

ಮೇ 4, 2026

*ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 

ಮೇ 4, 2026

*ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*

ಮೇ 4, 2026

*ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 

ಮೇ 4, 2026

*ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*

ಮೇ 4, 2026

*ಗೋಣಿಕೊಪ್ಪಲುವಿನಲ್ಲಿ ನಗರ ಬಿಜೆಪಿ, ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ*

ಮೇ 4, 2026

*ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಷಂಶುದ್ದೀನ್*

ಮೇ 4, 2026

*ಗೋಣಿಕೊಪ್ಪ ನಗರ ಕಾಂಗ್ರೆಸ್‍ನಿಂದ ಸಂಭ್ರಮಾಚರಣೆ*

ಮೇ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.