
ಮಡಿಕೇರಿ ಆ.29 NEWS DESK : ಕೈಲ್ ಪೊಳ್ದ್ ಹಬ್ಬದ ಆಚರಣೆಯ ಅಂಗವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ ನೆರವೇರಿತು. ಪ್ರತೀ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ಭಗವತಿ ದೇವಿ, ಕ್ಷೇತ್ರಪಾಲಕ, ನಾಗ, ಗಣಪತಿಗೆ ಪೂಜೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಒಳಿತನ್ನು ಮಾಡಲೆಂದು ಊರಿನ ಹಿರಿಯರಾದ ಬಟ್ಟೀರ ಕಾವೇರಪ್ಪನ ಪ್ರಾರ್ಥಿಸಿದರು. ಮಹಾ ಮಂಗಳಾರತಿಯ ನಂತರ ಪ್ರಸಾದವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.









