ವಿರಾಜಪೇಟೆ ಆ.30 NEWS DESK : ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೋಣಿಕೊಪ್ಪಲು ಲಯನ್ಸ್ ಶಾಲೆ ವತಿಯಿಂದ ಆಯೋಜಿಸಲಾದ ತಾಲೂಕು ಮಟ್ಟದ ಅಂತರ ಶಾಲಾ ದೇಶಭಕ್ತಿಗೀತೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಭಾಷಣ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕ್ಷಮಾ ಪಿ.ಪಿ.ಕಾವೇರಮ್ಮ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಎಂ.ಎನ್.ನಿಶಾನ್ ಪ್ರಥಮ, ದೇಶ ಭಕ್ತಿ ಗೀತೆಯಲ್ಲಿ ಎಂಟನೇ ತರಗತಿಯ ಎ.ಹನಿಯ ತೃತೀಯ ಹಾಗೂ ಏಳನೇ ತರಗತಿಯ ದಕ್ಷ್ ಭೋಜಣ್ಣ ತೃತೀಯ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಈ ಸಂದರ್ಭ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪಿ .ಯು.ಪಾರ್ವತಿ ಹಾಗೂ ಸಹ ಶಿಕ್ಷಕಿ ಕೆ.ಎಸ್.ನಿಶಾ ಮತ್ತು ಎಂ.ಕೆ.ಸುರಯ್ಯ ಹಾಜರಿದ್ದರು.