ನಾಪೋಕ್ಲು ಆ.30 NEWS DESK : ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ನಡೆದ ನಾಪೋಕ್ಲು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ನಾಪೋಕ್ಲುವಿನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೀರಿಸಿಕೊಂಡಿದ್ದಾರೆ. ಕಬಡ್ಡಿ ಮತ್ತು ಖೋ-ಖೋ ಬಾಲಕರ ವಿಭಾಗ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಖೋ-ಖೋ ಪ್ರಥಮ ಮತ್ತು ಕಬಡ್ಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗ ಚೆಸ್ ಆಟದಲ್ಲಿ ಚಂದನ್, ಮಹೇಂದ್ರ ಹಾಗೂ ಗೌತಮ್, ಬಾಲಕಿಯರ ವಿಭಾಗದಲ್ಲಿ ಅಮೃತ ಮತ್ತು ಯಕ್ಷಿತ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅಥ್ಲೆಟಿಕ್ಸ್ ಬಾಲಕರ ವಿಭಾಗದಲ್ಲಿ 200ಮೀ. ಮನುಗೌಡ ದ್ವಿತೀಯ, 400ಮೀ. ವಚನ್ ಪ್ರಥಮ, ಚಂದನ್ ತೃತೀಯ, 800ಮೀ. ಚೆಂಗಪ್ಪ ಪ್ರಥಮ, ದ್ವಿತೀಯ ಲಿತೇಶ್, 1500ಮೀ. ವಿಕಾಸ್ ವಿ.ಕೆ ಪ್ರಥಮ, ಕುಶಾಲ್ ದ್ವಿತೀಯ, 3000ಮೀ. ಶಶಿಕಾಂತ್ ತೃತೀಯ, ಗುಂಡು ಎಸೆತದಲ್ಲಿ ವಿನಾಯಕ್ ಎಂ.ಎ ದ್ವಿತೀಯ, ಭರ್ಜಿ ಎಸೆತದಲ್ಲಿ ಬಸವರಾಜ್ ತೃತೀಯ, ಉದ್ದ ಜಿಗಿತ ಮತ್ತು ಟ್ರಿಪಲ್ ಜಂಪ್ ಖುಶಿ ಕೆ.ಎಂ ಪ್ರಥಮ, ಟ್ರಿಪಲ್ ಜಂಪ್ ಮನುಗೌಡ ದ್ವಿತೀಯ, ್ಠ4400 ರಿಲೇ ಪ್ರಥಮ, ್ಠ4100 ರಿಲೇ ಪ್ರಥಮ, ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ 200ಮೀ. ದ್ವಿತೀಯ ಯಶ್ಮಿತ ಬಿ. ಜಿ, 400ಮೀ ತೀರ್ಥ ಪ್ರಥಮ ಮತ್ತು ಕೀರ್ತನ ಎಸ್. ಹೆಚ್.ದ್ವಿತೀಯ, 800ಮೀ. ಪ್ರೀತಿಕ ಪ್ರಥಮ, ಯಕ್ಷಿ ಕೆ.ಎಂ.ದ್ವಿತೀಯ, ್ಠ4400 ರಿಲೇ ಪ್ರಥಮ, ್ಠ4100 ರಿಲೇ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆ.ಪಿ. ಎಸ್ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ವಿಭಾಗದಲ್ಲಿ ಖೋ – ಖೋ ಪ್ರಥಮ, ಉದ್ದ ಜಿಗಿತದಲ್ಲಿ ಜೋಶ್ವ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಖೋ – ಖೋ ದ್ವಿತೀಯ, ಗಾನವಿ 400ಮೀ. ಓಟ ಪ್ರಥಮ, ಲಾಂಗ್ ಜಂಪ್ ದ್ವಿತೀಯ, ರಚಿತ 600ಮೀ. ಓಟ ದ್ವಿತೀಯ, ಲಾಂಗ್ ಜಂಪ್ ತೃತೀಯ, ರಿಲೇ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಂಬೇಡ್ಕರ್ ಶಾಲೆಯ ಪ್ರಾಂಶುಪಾಲರಾಗಿರುವ ಕೆ.ಡಿ. ನೀತಾ ಅವರ ಮಾರ್ಗದರ್ಶನ, ಶಿಕ್ಷಕ ವೃಂದದವರ ಪ್ರೋತ್ಸಾಹ ಹಾಗೂ ಶಾಲೆಯ ದೈಹಿಕ ಶಿಕ್ಷಕಿ ಶ್ಯಾಮಿಲಿ ಇವರ ಉತ್ತಮ ತರಬೇತಿಯೊಂದಿಗೆ ಈ ಸಾಲಿನ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿಯನ್ನು ತಂದಿರುವುದು ಹೆಮ್ಮೆಯ ವಿಷಯವಾಗಿದ್ದು ,ಕ್ರೀಡಾ ಸಾಧನೆಯಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರೆತು ಯಶಸ್ಸು ಸಿಗಲಿ ಎಂಬುದು ಶಾಲಾ ಆಡಳಿತ ಮಂಡಳಿಯ ಶುಭ ಹಾರೈಸಿದೆ.
ವರದಿ : ದುಗ್ಗಳ ಸದಾನಂದ.