
*ಸಿದ್ದಾಪುರ NEWS DESK ಆ.30 : ಕೈಲ್ ಮುಹೂರ್ತದ ಪ್ರಯುಕ್ತ ಅಭ್ಯತ್ ಮಂಗಲ ಒಂಟಿಯಂಗಡಿಯ ಶ್ರೀದಂಡಿನ ಮಾರಿಯಮ್ಮ ವಾರ್ಷಿಕ ಉತ್ಸವವು ಸೆ.2 ರಂದು ನಡೆಯಲಿದೆ. ದೇವಾಲಯದ ತಕ್ಕರಾದ ಅಂಚೆಮನೆ ಆದರ್ಶ್ ಅವರ ಮನೆಯಿಂದ ಮಧ್ಯಾಹ್ನ 12ಗಂಟೆಗೆ ಭಂಡಾರ ತಂದ ನಂತರ ವಿಶೇಷ ಪೂಜೋತ್ಸವ ಮತ್ತು ಮಹಾಮಂಗಳಾರತಿ ಜರುಗಲಿದೆ. ಅಂಚೆಮನೆ ಸತೀಶ್ ಕುಟ್ಟಪ್ಪ ಅವರು ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.








