ಮಡಿಕೇರಿ NEWS DESK ಸೆ.1 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವರ ಪರವಾಗಿ ನಡೆಸುತ್ತಿರುವ ಹೋರಾಟದ ಕುರಿತು ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲು ನ.1 ರಂದು ದೆಹಲಿ ಚಲೋ ರ‍್ಯಾಲಿ ನಡೆಸಲು ನಿರ್ಧರಿಸಿರುವುದಾಗಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ 29ನೇ ವರ್ಷದ ಸಾರ್ವತ್ರಿಕ “ಕೈಲ್ ಪೊಳ್ದ್” ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವ ಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಮಂಡಿಸುವ 34ನೇ ವರ್ಷದ “ಕೊಡವ ನ್ಯಾಷನಲ್ ಡೇ” ಕಾರ್ಯಕ್ರಮವನ್ನು ಇದೇ ನ.26 ರಂದು ಕ್ಯಾಪಿಟಲ್ ವಿಲೇಜ್‌ನಲ್ಲಿ ಆಚರಿಸಲಾಗುವುದು ಎಂದು ಘೋಷಿಸಿದರು. ಕೊಡವ ಕುಲದ ಉದ್ಭವ, ವಿಕಾಸ ಮತ್ತು ಕೊಡವ ತಾಯಿನೆಲದ ಸೃಷ್ಟಿ ಈ ಮಣ್ಣಿನಲ್ಲಿ ಆರ್ವಿಭವಿಸಿದೆ. ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಬುಡಕಟ್ಟು ಜನಾಂಗದ ಕೊಡವರಲ್ಲಿ ಹುಟ್ಟಿನಿಂದಲೂ ಅಂತರ್ಗತವಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಶಾಶ್ವತ ಹಕ್ಕಾಗಿದೆ. ಈ ಭೂಮಿಯಲ್ಲಿ ಮಾನವ ಸಮುದಾಯದ ಉತ್ಪತ್ತಿಯ ಲಾಗಯಿತು ಕೊಡವ ಯೋಧ ಪ್ರವೃತ್ತಿ ಅನುವಂಶಿಕವಾಗಿ ಬಂದಿದ್ದು, ಅದನ್ನು ಜತನದಿಂದ ಕಾಯ್ದುಕೊಳ್ಳುತ್ತ ಬರಲಾಗಿದೆ. ತೋಕ್/ಬಂದೂಕು ಮತ್ತು ಭೂಮಿಯೊಂದಿಗೆ ಕೊಡವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. “ಸಂಸ್ಕಾರ ಗನ್ / ಶಸ್ತ್ರಾಸ್ತ್ರಗಳು’ ಕೊಡವ ಜನಾಂಗದ ಹುಟ್ಟು ಮತ್ತು ಸಾವು ಹಾಗೂ ಕೊಡವ ಕುಲದ ವಿಕಾಸವನ್ನು ಸಾಕ್ಷೀಕರಿಸುತ್ತಿವೆ. ಈ ಪವಿತ್ರ ಕೊಡವ ತಾಯ್ನಾಡಿನಲ್ಲಿ ಬಂದೂಕು ಕೊಡವ ಜನಾಂಗದ ಸಮರ ಪರಂಪರೆಗೆ ಮತ್ತು ಪೂರ್ವಜರ ಪ್ರಾಚೀನತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಭೂ ದೇವಿ, ಜಲದೇವಿ, ವನದೇವಿ, ಪರ್ವತ ದೇವಿ ಮತ್ತು ಪ್ರಕೃತಿ, ಬಂದೂಕ ಮತ್ತು ಮಂದ್‌ಗಳು ಕೊಡವರ ಆತ್ಮ ಮತ್ತು ಹೃದಯದಂತೆ ನಮ್ಮೊಂದಿಗಿದೆ. ಯಾವುದೇ ಒಂದು ಸಿದ್ಧಾಂತ ಕಳೆದು ಹೋದರೂ, ಅದು ಕೊಡವ ಜನಾಂಗಕ್ಕೆ ಪಾರ್ಶ್ವಾವಾಯು ಬಡಿದಂತೆ ದೊಡ್ಡ ವಿಪತ್ತು ಉಂಟಾಗಲಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ “ಕೈಲ್ ಪೊಳ್ದ್” ಹಬ್ಬ ಆಚರಣೆಯ ಈ ಶುಭ ಸಂದರ್ಭದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ರಾಜ್ಯಾಂಗದತ್ತ ನಿರ್ಣಯಗಳನ್ನು ಮಂಡಿಸುತ್ತಿರುವುದಾಗಿ ಹೇಳಿದರು.
::: ನಿರ್ಣಯಗಳು :::
ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದ 6ನೇ ಮತ್ತು 8ನೇ ಶೆಡ್ಯೂಲ್‌ಗಳ ಆರ್ಟಿಕಲ್ 244, 371(ಕೆ) R/W ಅಡಿಯಲ್ಲಿ ಆಂತರಿಕ ರಾಜಕೀಯ ಸ್ವಯಂ-ನಿರ್ಣಯದ ಹಕ್ಕುಗಳೊಂದಿಗೆ ಕೊಡವ ಸ್ವಯಂ ಆಡಳಿತವನ್ನು ಮಾನ್ಯ ಮಾಡಬೇಕು, ವಿಶ್ವ ರಾಷ್ಟ್ರ ಸಂಸ್ಥೆ ಕಲ್ಪಿಸಲ್ಪಟ್ಟ ಆದಿಮಸಂಜಾತ ಬುಡಕಟ್ಟು ಜನರ ಹಕ್ಕುಗಳ ಅಡಿಯಲ್ಲಿ ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಘೋಷಿಸಲ್ಪಟ್ಟ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವರ ಎಲ್ಲಾ ಹಕ್ಕುಗಳ ರಕ್ಷಣೆಯಾಗಬೇಕು. ಆರ್ಟಿಕಲ್ 340 ಮತ್ತು 342 ರ ಅಡಿಯಲ್ಲಿ ಕೊಡವ ಜನಾಂಗಕ್ಕೆ ಎಸ್‌ಟಿ ಟ್ಯಾಗ್ ನೀಡಬೇಕು. ನಮ್ಮ ಮಾತೃ ಭಾಷೆಯಾದ ಕೊಡವ ತಕ್ಕ್ ಅನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ ಸಂಸ್ಕಾರ ಗನ್ ನ್ನು ಸಂವಿಧಾನದ 25 ಮತ್ತು 26ನೇ ವಿಧಿಗಳಲ್ಲಿ ಸೇರ್ಪಡೆಗೊಳಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿತ್ವ ಮತ್ತು ಕಾನೂನಾತ್ಮಕ ವ್ಯಕ್ತಿಯ ಸ್ಥಾನಮಾನ ನೀಡಬೇಕು ಮತ್ತು ಜಲ ದೇವತೆ ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಯನ್ನು ಸರ್ಕಾರವು ಕೊಡವ ಜನಾಂಗದ ಪವಿತ್ರ ತೀರ್ಥ ಯಾತ್ರಾ ಕೇಂದ್ರವಾಗಿ ಪರಿಗಣಿಸಬೇಕು, ಪ್ರವಾಸಿ ಕೇಂದ್ರವಾಗಿ ಪರಿಗಣಿಸಬಾರದು. ಹೆಲ್ಸಿಂಕಿ ನಿಯಮ 1966ರ ಪ್ರಕಾರ ಕಾವೇರಿಯ ನೀರಿನ ಪಾಲನ್ನು ಕೊಡವಲ್ಯಾಂಡ್‌ಗೆ ಹಂಚಿಕೆ ಮಾಡಬೇಕು. ನಾಲ್ನಾಡಿನ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ನಡೆದ ಕೊಡವರ ರಾಜಕೀಯ ಹತ್ಯೆಗಳ ಹಿನ್ನೆಲೆ ಸ್ಮಾರಕಗಳನ್ನು ನಿರ್ಮಿಸಬೇಕು. ಉಲುಗುಲಿ-ಸುಂಟಿಕೊಪ್ಪ ಹಾಗೂ ಮುಳ್ಳುಸೋಗೆಯಲ್ಲಿ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ಸಂವಿಧಾನದ ವಿಧಿ 49ರ ಅಡಿಯಲ್ಲಿ ದೇವಟ್‌ಪರಂಬ್‌ನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಹತ್ಯಾಕಾಂಡದ ಸ್ಮರಣೆಯ ಪಟ್ಟಿಯಲ್ಲಿ ಸೇರಿಸಬೇಕು. ಜನಸಂಖ್ಯಾ ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಾಮುದಾಯಿಕ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ-ಪಾರಮಾರ್ಥಿಕ ಸ್ಥಾನಗಳಾದ ಮಂದ್, ದೇವಕಾಡ್ ಮತ್ತು ಈ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ರಕ್ಷಿಸಲು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ರ‍್ಲೆöÊನ್‌ರ‍್ಮಿಟ್ (ಐಎಲ್‌ಪಿ) ಜಾರಿಗೆ ತರಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ನೀಡಿರುವ ವಿಶೇಷ ರಾಜಕೀಯ ಪ್ರಾತಿನಿಧ್ಯವಾದ “ಸಂಘ” ಅಮೂರ್ತ ಮತಕ್ಷೇತ್ರದಂತೆ ಕೊಡವ ಜನಾಂಗಕ್ಕೆ ಪ್ರತ್ಯೇಕವಾಗಿ ಒಂದು ಅಮೂರ್ತ/ಅದೃಶ್ಯ ಕೊಡವ ಸಂಸದೀಯ ಮತ್ತು ಅಸೆಂಬ್ಲಿ ಕ್ಷೇತ್ರವನ್ನು ಸ್ಥಾಪಿಸಿ, ಭಾರತದ ಪಾರ್ಲಿಮೆಂಟ್ ಸೆಂಟ್ರಲ್ ವಿಸ್ತಾ ಮತ್ತು ಕರ್ನಾಟಕದ ಶಾಸಕಾಂಗಳಲ್ಲಿ ಪ್ರತಿನಿಧಿಸಲು ಅವಕಾಶ ನೀಡಬೇಕು. ಕೊಡವ ಲ್ಯಾಂಡ್ ಗೆ ಮಾರಕವಾಗಿರುವ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾ ಹಾಗೂ ಕಪ್ಪುಹಣದ ಬಂಡವಾಳಶಾಹಿಗಳ ವಿರುದ್ಧ ಸಿಎನ್‌ಸಿ ಸಂಘಟನೆ ನಡೆಸುತ್ತಿರುವ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಸರ್ವ ಕೊಡವರು ಪಾಲ್ಗೊಳ್ಳಬೇಕು. ಆದಿಮಸಂಜಾತ ಕೊಡವ ಬುಡಕಟ್ಟು ಜನರ ಹಬ್ಬಗಳಾದ ಎಡಮ್ಯಾರ್, ಕಕ್ಕಡ ಪದ್ನೆಟ್, ಕಾರೋಣ್ ಕೊಡ್ಪ ಆಚರಣೆ, ಕೈಲ್ ಪೌಳ್ದ್, ಕಾವೇರಿ ಚಂಗ್ರಾಂದಿ, ಪಾಥೋಲೋಧಿ ಮತ್ತು ಪುತ್ತರಿ, ಕೊಡವರ ಪವಿತ್ರ ರತ್ನಗಳಾದ ಕೊಡವ ತಾಯ್ನಾಡು, ಕೊಡವ ಭೂಪ್ರದೇಶ, ಜಲಸಂಪನ್ಮೂಲವಾದ ದೈವಿಕ ವಸಂತ ಕಾವೇರಿ, ಕೊಡವರ ಪವಿತ್ರ ಯಾತ್ರಾಕೇಂದ್ರ ತಲಕಾವೇರಿ, ಮಂದ್ ಗಳು, ಸಮಾಧಿಗಳು, ಯುದ್ಧ ಸ್ಮಾರಕಗಳು, ನರಮೇಧದ ಸ್ಮಾರಕಗಳು, ದೇವರಕಾಡುಗಳು, ಸಸ್ಯರಾಶಿ, ವನ್ಯಜೀವಿ, ಪರ್ವತಗಳು, ಜಲಪಾತಗಳು, ಕೊಡವರ ಸಾಂಪ್ರದಾಯಿಕ ಆಭರಣಗಳಾದ ಪೀಚೆಕತ್ತಿ, ವೇಷಭೂಷಣಗಳು, ಸಾಂಪ್ರದಾಯಿಕ ಪಾಕಪದ್ಧತಿ, ಕೊಡವ ಜಾನಪದ ಕಲೆ, ಕೊಡವ ಥಕ್, ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಸಮರ ಕಲೆ, ಯೋಧ ಪರಂಪರೆ, ಕೃಷಿ ಬದ್ಧತೆ ಮತ್ತಿತರ ಕೊಡವ ಪದ್ಧತಿಗಳನ್ನು ಸೂರ್ಯ ಚಂದ್ರರಿರುವವರೆಗೆ ಉಳಿಸಿಕೊಳ್ಳಲು ಸಿಎನ್‌ಸಿ ಸಭೆ ನಿರ್ಣಯ ಕೈಗೊಂಡಿತು.
::: “ತೋಕ್ ಪೂವ್” ನಿಂದ ಪೂಜೆ :::
ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ “ಕೈಲ್ ಪೊಳ್ದ್” ಪ್ರಯುಕ್ತ “ತೋಕ್ ಪೂವ್” ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಪೂಜ್ಯ ಸ್ಥಾನದಲ್ಲಿರುವ ಗುರುಕಾರೋಣರಿಗೆ ಮೀದಿ ಇಟ್ಟು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಕೋರಲಾಯಿತು. ಕೊಡವರು ಹಾಗೂ ಕೊಡವತಿಯರು ಶಸ್ತ್ರಾಸ್ತ್ರಗಳ ಸಾಮೂಹಿಕ ಆರಾಧನೆಯಲ್ಲಿ ಬಂದೂಕು ಮತ್ತು ಒಡಿಕತ್ತಿಯೊಂದಿಗೆ ಪಾಲ್ಗೊಂಡರು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಿದರು.
ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ “ಕೈಲ್ ಪೊಳ್ದ್” ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮಾಚರಣೆಯನ್ನು ಹಂಚಿಕೊಳ್ಳಲಾಯಿತು. ಕಲಿಯಂಡ ಮೀನಾ, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಮಂದಪಂಡ ರಚನ, ನಂದಿನೆರವಂಡ ನಿಶಾ, ಪಾಲಂದಿರ ಲೀಲ, ನಂದಿನೆರವಂಡ ಬೀನಾ, ಅಜ್ಜಿನಿಕಂಡ ಇನಿತಾ, ಅಪ್ಪಾರಂಡ ವಿನ್ಸಿ, ನಂದಿನೆರವಂಡ ಸೋನಿ, ಮುದ್ದಿಯಡ ಲೀಲಾವತಿ, ಮಂದಪಂಡ ನೇಹಲಿ ದೇಚಕ್ಕ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಚಂಬಂಡ ಜನತ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ನಂದೇಟಿರ ರವಿ, ಬಡುವಂಡ ವಿಜಯ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಪೊರಿಮಂಡ ದಿನಮಣಿ, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಪುಟ್ಟಿಚಂಡ ದೇವಯ್ಯ, ಮಣವಟ್ಟಿರ ಚಿಣ್ಣಪ್ಪ, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ನಂದಿನೆರವಂಡ ಟಿಪ್ಪು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ದಿನೇಶ್, ಚೋಳಪಂಡ ನಾಣಯ್ಯ, ನಂದಿನೆರವಂಡ ಅಯ್ಯಣ್ಣ, ನಂದಿನೆರವಂಡ ವಿಜು, ನಂದಿನೆರವಂಡ ಮಧು, ನಂದಿನೆರವಂಡ ಬೋಪಣ್ಣ, ನಂದಿನೆರವಂಡ ಅಪ್ಪಣ್ಣ, ನಂದಿನೆರವಂಡ ಬೋಪಣ್ಣ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಮಣವಟ್ಟೀರ ನಂದ, ಮಣವಟ್ಟೀರ ಸ್ವರೂಪ್, ಬಾಚಮಂಡ ಪೂವಪ್ಪ, ಚೀಯಬೇರ ಸತೀಶ್, ಅಳ್ಮಂಡ ನೆಹರು, ನಂದಿನೆರವಂಡ ಶ್ಲೋಕ್, ಐಲಪಂಡ ಮಿಟ್ಟು, ಹಂಚೇಟ್ಟಿರ ಮನು ಮುದ್ದಪ್ಪ, ಸೋಮೆಯಂಡ ರೇಶ, ಪಾಲೆಕಂಡ ಪ್ರತಾಪ್, ಮೀದೇರಿರ ತಿಮ್ಮಯ್ಯ, ಪಾಲಂದಿರ ಅರ್ಜುನ, ಬಾಚಿರ ಚಿಣ್ಣಪ್ಪ, ಪೊಯ್ಯೇಟಿರ ನಂದ, ಮಂಡೇಟಿರ ಮಂದಪ್ಪ, ಪೂಲಂಡ ಪೂವಯ್ಯ, ಪೆಮ್ಮಂಡ ಲವ, ಮೇದುರ ಕಂಠಿ, ಪಟ್ಟಮಾಡ ಅಶೋಕ್, ಮಂದಪಂಡ ನೆಹಾನ್ ನಾಚಪ್ಪ, ಮಂದಪಂಡ ವಿಹಾನ್ ದೇವಯ್ಯ, ಅಜ್ಜಿನಿಕಂಡ ಸನ್ನಿ, ಅಪ್ಪರಂಡ ಪ್ರಸಾದ್, ಮಾಳೆಯಂಡ ಮುತ್ತಪ್ಪ ಮತ್ತಿತರರು ಪಾಲ್ಗೊಂಡು ಸಿಎನ್‌ಸಿ ಯ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.