ಸುಂಟಿಕೊಪ್ಪ NEWS DESK ಸೆ.1: ಯಾವುದೇ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಧಾರ್ಮಿಕ ಮೌಲ್ಯತೆಗೆ ದಕ್ಕೆ ಉಂಟಾಗದಂತೆ ಮೂಲತೆಯನ್ನು ಗಮನದಲ್ಲಿರಿಸಿಕೊಂಡರೇ ಹಬ್ಬದ ಆಚರಣೆಗೆ ಅರ್ಥ ಬರುತ್ತದೆ. ನಾವು ಆಚರಿಸುವ ಹಬ್ಬದ ವಿಶೇಷತೆ ಹರುಷದಲ್ಲಿ ಇತರರಿಗೆ ನೋವು ಸಂಕಷ್ಟಗಳನ್ನು ತಂದಿಡುತ್ತಿರುವುದು ವಿಷಾದ ಸಂಗತಿ ಡಿ.ಜೆ. ಹಿರಿಯ ಮತ್ತು ಪುಟ್ಟ ಕಂದಮ್ಮಗಳ ಜೀವಕ್ಕೆ ಮಾರಕವಾಗುತ್ತಿದೆ. ಗೃಹೋಪಯೋಗಿ ವಸ್ತು, ಮನೆಗಳಿಗೆ ಹಾನಿಗೊಳ್ಳಗಾಗುತ್ತಿರುವುದು ವಿಷಾದದ ಸಂಗತಿ. ಆಯೋಜಕರು ಇದರ ಗಮನಹರಿಸಿ ಡಿ.ಜೆ.ಗಳಿಗೆ ಆದ್ಯತೆ ನೀಡದಿರುವಂತೆ ಗೌರಿ ಗಣೇಶ ಆಚರಣಾ ಪೂರ್ವ ನಿಯೋಜಿತ ಸಭೆಯಲ್ಲಿ ಶನಿವಾರ ಸಂಜೆ ಕುಶಾಲನಗರ ವೃತ್ತನಿರೀಕ್ಷಕರಾದ ರಾಜೇಶ್ಕೋಟ್ಯಾನ್ ಹೇಳಿದರು. ಇಲ್ಲಿನ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀ.ಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವನಿಯೋಜಿತ ಸಭೆಯಲ್ಲಿ ರಾಜೇಶ್ಕೋಟ್ಯಾನ್ ಮಾತನಾಡಿದ ಅವರು, ಸರಕಾರವು ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮಗಳಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕ ಸಮಿತಿಗಳವರು ಪೊಲೀಸ್ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಮುಂಜಾಗೃತ ಕ್ರಮವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿಕ್ಯಾಮರಗಳನ್ನು ಅಳವಡಿಸುವುದರಿಂದ ಪುಂಡಾಪೋಕರಿಗಳು ಎಸಗುವ ಅಹಿತಕರ ಘಟನೆಗಳು ಸಂಭವಿಸದAತೆ ತಡೆಯಲು ಸಹಕರಿಯಾಗಲಿದೆ ಎಂದರು. ಪ್ರತಿಷ್ಠಾಪನಾ ವಿದ್ಯುತ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ಸೂಕ್ಷö್ಮತೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಇರ್ವರು ಪದಾಧಿಕಾರಿಗಳು ಕಾವಲು ಇರಿಸುವಂತೆ ಸೂಚಿಸಿದರು. ಸ್ಥಳದ ಪೂರ್ವಪರ ಮಾಹಿತಿಯನ್ನು ಪಡೆದಿರಬೇಕು ವಿಸರ್ಜನೆಯ ವೇಳೆ ನುರಿತ ಈಜು ಬಲ್ಲವರು ಅವರಿಗೆ ಸೂಕ್ತ ಭದ್ರತೆಯ ಜಾಕಿಟ್ ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜಿನೆಯ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿ ನಿಗಧಿಗೊಂಡಿರುವ ಸಮಯವನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ಅವರು ಸೂಚಿಸಿದರು.
ಈ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸರಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಸಭೆಯಲ್ಲಿ ಹರದೂರು, ನಾಕೂರು ಶಿರಂಗಾಲ, 7ನೇ ಹೊಸಕೋಟೆ, ಕಂಬಿಬಾಣೆ,ಕೊಡಗರಹಳ್ಳಿ, ಹೆರೂರು, ಕೆದಕಲ್, ಹೊರೂರು, ಮತ್ತಿಕಾಡು, ಭೂತನಕಾಡು, ಆಯೋಜಕರು ಪೊಲೀಸ್ ಸಿಬ್ಬಂದಿಗಳು ಇದ್ದರು.