
ಮಡಿಕೇರಿ ಸೆ.3 NEWS DESK : ಪೋಷಣ್ ಮಸಾಚರಣೆ ಅಂಗವಾಗಿ ಅಂಗನವಾಡಿ ಫಲಾನುಭವಿಗಗಳಾದ ಹದಿಹರೆಯದ ಹೆಣ್ಣು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಗಾಂಧಿನಗರ, ಶಾಸ್ತ್ರಿನಗರ, ಬಾಡಗ-1, ಬಾಡಗ-2, ಕೋಡಂಬೂರು, ಕಾಂತೂರು, ಕಿಗ್ಗಾಲು, ಐಕೊಳ 1, ಐಕೊಳ 2, ಐಕೊಳ 3 ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಫಲಾನುಭವಿಗಳು, ಮುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ವಿಜಯಕುಮಾರ್, ಹಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಹೇಮಲತಾ, ಆರೋಗ್ಯ ಇಲಾಖೆಯ ಕಾಂಚನ, ಮೇಪಾಡಂಡ ಸವಿತಾ ಕೀರ್ತನ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಹಾಜರಿದ್ದರು.








