ಮಡಿಕೇರಿ NEWS DESK ಸೆ.3 : ವಿಘ್ನ ವಿನಾಯಕನ ಪ್ರತಿಷ್ಠಾಪನೆ ಮತ್ತು ಆರಾಧನೆಗೆ ದಿನಗಣನೆ ಅರಂಭವಾಗಿದೆ. ಈಗಾಗಲೇ ವಿವಿಧ ಗಣೇಶೋತ್ಸವ ಸಮಿತಿಗಳು ಗಣೇಶ ಚತುರ್ಥಿಯ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಪ್ರತಿ ವರ್ಷ ವಿಜ್ರಂಭಣೆಯ ಗಣೇಶೋತ್ಸವಕ್ಕೆ ಹೆಸರುವಾಸಿಯಾಗಿರುವ ಮಡಿಕೇರಿಯ ಪುಟಾಣಿ ನಗರದ ಶ್ರೀಉದ್ಭವ ವಿನಾಯಕ ಸೇವಾ ಸಮಿತಿ 31ನೇ ವರ್ಷದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ನಡೆಸಿದೆ. ಹಗಲಿರುಳು ಯುವಕರ ತಂಡ ಶ್ರಮಿಸುತ್ತಿದ್ದು, ಈಗಾಗಲೇ ಪುಟಾಣಿ ನಗರದಲ್ಲಿ ಆಕರ್ಷಕ ಸ್ವಾಗತ ದ್ವಾರವನ್ನು ಳವಡಿಸಿದ್ದಾರೆ. ಈ ಬಾರಿ ಏಳು ದಿನಗಳ ಕಾಲ ಗಣಪತಿ ಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ. ವಿವಿಧ ಭಕ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲು ಸಮಿತಿ ನಿರ್ಧರಿಸಿದೆ. ಶಾಸಕ ಡಾ.ಮಂತರ್ ಗೌಡ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಶ್ರೀಉದ್ಭವ ವಿನಾಯಕ ಸೇವಾ ಸಮಿತಿಗೆ ಸಂಪೂರ್ಣ ಸಹಕಾರ ನೀಡುತ್ತಿರುವುದು ವಿಶೇಷ.