
ಸುಂಟಿಕೊಪ್ಪ NEWS DESK ಸೆ.4: ಕಾನ್‌ಬೈಲ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾ ಕೂಟದ ಥ್ರೋಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮಕ್ಕಳ ಸಾಧನೆಯನ್ನು ಶಾಲಾ ಮುಖ್ಯೋಪದ್ಯಾಯ ಕೆ.ಮೂರ್ತಿ, ದೈಹಿಕ ಶಿಕ್ಷಕಿ ಜಿ.ಕೆ.ಪಾರ್ವತಿ, ಸಹ ಶಿಕ್ಷಕರು, ಪಂಚಾಯಿತಿ ಸದಸ್ಯ ಕೊಳಂಬೆ ಸುಭಾಶ್ ಹಾಗೂ ಗ್ರಾಮಸ್ಥರು ಶ್ಲಾಘಿಸಿ ಅಭಿನಂದಿಸಿದರು.








