
ಸುಂಟಿಕೊಪ್ಪ ಸೆ.13 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ರಾಮಮಂದಿರದಲ್ಲಿ ನಡೆಯುತ್ತಿರುವ 60ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಕುಂದನ್ ನೃತ್ಯಾಲಯ ತಂಡ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ಮನಸೂರೆಗೊಳಿಸಿತು. ಗಣೇಶ ಸ್ತೋತ್ರದ ನಾಟ್ಯದೊಂದಿಗೆ ಆರಂಭಗೊಂಡ ನೃತ್ಯ ವೈಭವ, ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ‘ಕರ್ನಾಟಕದ ಇತಿಹಾಸದಲಿ’, ‘ ಮೂಷಿಕ ವಾಹನ’, ‘ ಬ್ರಹ್ಮ ಮುಖಟ’ ‘ ಕಾಂತಾರ’ ಸೇರಿದಂತೆ ಹತ್ತಾರು ಸುಂದರ ವೈವಿಧ್ಯಮಯ ಹಾಡಿಗೆ ಭರತನಾಟ್ಯದ ಮೂಲಕ ಎಲ್ಲರನ್ನು ಮನರಂಜಿಸಿತು. ಕೊನೆಯಲ್ಲಿ ಕಥಕ್ಕಳಿ ಮೂಲಕ ಮುಕ್ತಾಯಗೊಳಿಸಲಾಯಿತು. ಕುಂದನ್ ನೃತ್ಯಾಲಯದ ವಿನುತಾ ಹೇಮಂತ್ ಮತ್ತು ಸ್ಟೆಪ್ ಕಮ್ ಡಾನ್ಸ್ ಟ್ಯುಟೋರಿಯಲ್ ನ ರಶ್ಮಿ ಶಿವಕುಮಾರ್ ಅವರ ನೇತೃತ್ವದ ತಂಡ ಮನಮೋಹಕ ಭರತನಾಟ್ಯದ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು. ನಂತರ ಮಹಾಪೂಜೆ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಇಂದಿನ ಕಾರ್ಯಕ್ರಮ :: ಸಂಜೆ 7 ರಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಾವಗೀತೆ, ಭಕ್ತಿಗೀತೆ, ಛದ್ಮವೇಷ ಸ್ಪರ್ಧೆ ನಡೆಯಲಿದೆ.








