


ಮಡಿಕೇರಿ ಸೆ.14 NEWS DESK : ಪೊನ್ನಂಪೇಟೆಯ ನಿನಾದ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಪಿ.ಎಸ್.ಅನಲ್, ಜಶ್ವಂತ್ ಬೋಪಣ್ಣ, 9ನೇ ತರಗತಿಯ ವಿದ್ಯಾರ್ಥಿಗಳಾದ ವೃಶಾಂಕ್ ದೇವಯ್ಯ, ಯು.ಎಸ್.ಶ್ರೀವತ್ಸ, ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಎಂ.ಎಸ್ ಬಿಶನ್ ಮುತ್ತಣ್ಣ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿಯರು, ಸಹ ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರುಗಳಿಗೆ ದೈಹಿಕ ಶಿಕ್ಷಕಿಯರಾದ ಮೋನಿಕಾ ಕಾವೇರಿ ಹಾಗೂ ಲಾವಣ್ಯ ತರಬೇತಿ ನೀಡಿದ್ದಾರೆ. ಈ ಸಂದರ್ಭ ಮುಖ್ಯ ಶಿಕ್ಷಕಿ ಬಿ.ಎಸ್.ಜ್ಯೋತಿ, ಪೂರ್ವ ಪ್ರಾಥಮಿಕ ಸಂಯೋಜಕಿ ಅಮೃತ ಅರ್ಜುನ್, ದೈಹಿಕ ಶಿಕ್ಷಕಿಯರುಗಳಾದ ಶ್ರೀಮತಿ ಮೋನಿಕಾ ಕಾವೇರಿ ಹಾಗೂ ಲಾವಣ್ಯ ಹಾಜರಿದ್ದರು.








