



ನವದೆಹಲಿ NEWS DESK ಸೆ.17 : ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರ ಪ್ರಮುಖ ಬೆಳೆಯಾದ ಕರಿಮೆಣಸಿಗೆ ಲಗತ್ತಿಸಲ್ಪಡುವ ಜಿ.ಎಸ್.ಟಿ ವಿನಾಯಿತಿ ಕುರಿತು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರೊಂದಿಗೆ ಚರ್ಚಿಸಿದರು.
ಕರಿಮೆಣಸಿಗೆ ವಿಧಿಸುವ ಜಿ.ಎಸ್.ಟಿಯಿಂದಾಗುವ ಸಾಧಕ ಬಾಧಕಗಳ ಬಗ್ಗೆ ಗಮನ ಸೆಳೆದ ಸಂಸದರು ವಿನಾಯಿತಿಯನ್ನು ಮುಂದುವರಿಸುವAತೆ ಕೋರಿ ಮನವಿ ಸಲ್ಲಿಸಿದರು.