ಸುಂಟಿಕೊಪ್ಪ ಸೆ.17
NEWS DESK : ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದನ್ನು ಸಂಭ್ರಮದಿಂದ ಆಚರಿಸಿದರು. ಮುಂಜಾನೆ ಸುಂಟಿಕೊಪ್ಪ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮಿಲಾದ್ ಸಂದೇಶ ಜಾಥಾ ನಡೆಸಿ ಶಾಂತಿ ಸೌಹಾರ್ದತೆಯ ಸಂದೇಶ ಸಾರಿದರು. ವಿಶೇಷ ಉಡುಗೆಗಳನ್ನು ತೊಟ್ಟು ದಫ್ ಪ್ರದರ್ಶನ ನೀಡಿದರು. ಸುಂಟಿಕೊಪ್ಪ ಶ್ರೀ ಕೋದಂಡ ರಾಮ ದೇವಾಲಯದ ಬಳಿಯಲ್ಲಿ ಪಂಚಾಯಿತಿ ಸದಸ್ಯ ಮಂಜು, ಬಿ.ಎಂ.ಸುರೇಶ್, ಉದ್ಯಮಿ ದೀನು ದೇವಯ್ಯ, ಧನು ಕಾವೇರಪ್ಪ, ಸುರೇಶ್‍ಗೋಪಿ, ಎಂ.ಎಸ್.ಸುನಿಲ್ ಹಾಗೂ ಭುವಿತ್ ಮುಸ್ಲಿಂ ಬಾಂಧವರಿಗೆ ತಂಪು ಪಾನೀಯವನ್ನು ವಿತರಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು. ಸುಂಟಿಕೊಪ್ಪ ಪಟ್ಟಣದ ಸುಂಟಿಕೊಪ್ಪ ಮುಸ್ಲಿಂ ಜಮಾಯತ್‍ನ ಇಬ್ರಾಹಿಂ ಹ್ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮದ್ ಹುಸೈನ್ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‍ನ ಅಬ್ಧುಲ್ ಅಜೀಜ್ ಅವರುಗಳು ಧಾರ್ಮಿಕ ಪ್ರವಚ ನೀಡಿದರು. ಮುಂಜಾಗೃತ ಕ್ರಮವಾಗಿ ಕೊಡಗು ಜಿಲ್ಲಾ ವರೀಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ತಾಲೂಕು ಡಿವೈಎಸ್‍ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತನೀರಿಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಸಶಸ್ತ್ರ ಪಡೆಯ ಪೊಲೀಸರು ಬಿಗಿ ಬಂದೋಬಸ್ತನ್ನು ಕಲ್ಪಿಸಿದರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.