ಸುಂಟಿಕೊಪ್ಪ ಸೆ.18 NEWS DESK : ಸುಂಟಿಕೊಪ್ಪ ಜೆಸಿಐ ಸಂಸ್ಥೆ ಹಾಗೂ “ವಿಷನ್ ಸ್ಪ್ರಿಂಗ್” ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ 162 ಮಂದಿ ತಪಾಸಣೆಗೆ ಒಳಗೊಂಡು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆದರು. ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ದೇಹದಲ್ಲಿ ಕಣ್ಣು ಪ್ರಧಾನ ಅಂಗವಾಗಿದ್ದು, ಅದನ್ನು ಸೂಕ್ಷ್ಮತೆಯಿಂದ ಕಾಪಾಡಿಕೊಳ್ಳಬೇಕು. ಕಣ್ಣಿನ ದೃಷ್ಟಿಯು ಸರಿಯಾಗಿದ್ದರೆ ಸ್ವತಂತ್ರವಾಗಿ ಜೀವಿಬಹುದೆಂದು ಅವರು ಹೇಳಿದರು. ಶಿಬಿರವನ್ನು ನಡೆಸಿಕೊಟ್ಟ ನೇತ್ರ ತಜ್ಞ ಡಾ.ಅವಿನಾಶ್ ಮಾತನಾಡಿ, ಸ್ವಯಂ ಸೇವ ಸಂಸ್ಥೆಗಳು ಸಮಾಜಮುಖಿಯಾಗಿ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡೆನ್ನಿಸ್ ಡಿಸೋಜ, ಜಿ.ಬಿ.ಹರೀಶ್, ಹೆಚ್.ಆರ್.ಅರುಣ್ ಕುಮಾರ್, ಪ್ರೀತಂ ಪ್ರಭಾಕರ್ ಸದಸ್ಯ ನಿಯಾಜ್ ಸೇರಿದಂತೆ ಇತರರು ಹಾಜರಿದ್ದರು.