ಮಡಿಕೇರಿ NEWS DESK ಸೆ.18 : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಕುಶಾಲನಗರ ತಾಲ್ಲೂಕು ಘಟಕವನ್ನು ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಪೀಟರ್ ಕೆ.ಎ ಕೂಡಿಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪೌಲ್ಸನ್ ಜಾಯ್ ಕುಶಾಲನಗರ ಆಯ್ಕೆಯಾದರು. ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಬಿ.ಎಸ್.ಶಾಂತಪ್ಪ, ಗೌರವ ಸಲಹೆಗಾರರಾಗಿ ಡೆನಿಲ್ ನರೋನ, ಸಹ ಕಾರ್ಯದರ್ಶಿಯಾಗಿ ರೀಟಾ ಮೆನೆಜಸ್ ಕೂಡಿಗೆ, ಉಪಾಧ್ಯಕ್ಷರುಗಳಾಗಿ ಗ್ರೇಸಿ ಸುಂಟಿಕೊಪ್ಪ, ಬ್ಲೇಜಿ ಕ್ರಾಸ್ತಾ ಕುಶಾಲನಗರ, ಸಿಸಿಲಿ ಜೋಸೆಫ್ ಕೂಡಿಗೆ, ಸಾಜಿ ಬೈಲಿ ಚೆಟ್ಟಳ್ಳಿ, ಅಲೆಕ್ಸ್ 7ನೇ ಹೊಸಕೋಟೆ, ಖಜಾಂಜಿಯಾಗಿ ಆಲ್ಬರ್ಟ್ ಗಾನ್ಸ್ವೆಲ್ಸ್, ಮಹಿಳಾ ಪ್ರತಿನಿಧಿಯಾಗಿ ಜಾನ್ಸಿ ಪೀಟರ್ ಕೂಡಿಗೆ, ಸಾಮಾಜಿಕ ಜಾಲತಾಣದ ಪ್ರಮುಖರಾಗಿ ರೇಷ್ಮಾ ವಿ. ಪ್ರಸಾದ್ ಕೂಡಿಗೆ ಆಯ್ಕೆಗೊಂಡರು. ಸುಂಟಿಕೊಪ್ಪ, ಕುಶಾಲನಗರ, ಚೆಟ್ಟಳ್ಳಿ, ಕೂಡಿಗೆ ಮತ್ತು 7ನೇ ಹೊಸಕೋಟೆ ಈ 5 ಧರ್ಮಕೇಂದ್ರಗಳಿಂದ ಸದಸ್ಯರುಗಳನ್ನು ಆಯ್ಕೆ ಮಾಡಿ ನೂತನ ಕುಶಾಲನಗರ ತಾಲ್ಲೂಕು ಘಟಕದ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಕುಶಾಲನಗರ ಕೂಡ ಸದಸ್ಯ ಸಾಜಿ ವಿ.ಎ ಹಾಗೂ ವಿರಾಜಪೇಟೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಾನ್ಸನ್ ಅವರುಗಳನ್ನು ರೋಮನ್ ಕ್ಯಾಥೋಲಿಕ್ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಫಿಲಿಪ್ ಅವರು ಸ್ವಾಗತಿಸಿ ವಂದಿಸಿದರು. ಇತ್ತೀಚೆಗೆ ನಿಧನ ಹೊಂದಿದ ವಿರಾಜಪೇಟೆ ಧರ್ಮ ಕೇಂದ್ರದ ಸಿಂಗರ್ ನೋಬಿನ್ ಕೆವಿನ್ ಅವರಿಗೆ ಸಭೆ ಸಂತಾಪ ಸೂಚಿಸಿತು.