ಮಡಿಕೇರಿ ಸೆ.18 NEWS DESK : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ 2023-24ನೇ ಸಾಲಿನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಸಾಲಗಳನ್ನು ಹೊರತು ಪಡಿಸಿದಂತೆ 28.90 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ ಸಾಲದ ಹೊರೆಯೂ ಇದೆ. ಜಿಲ್ಲಾ ಕೇಂದ್ರ ಸಹಕಾರ ಸಂಘಕ್ಕೆ 114.47 ಲಕ್ಷ ರೂ. ಸಾಲ ಮರುಪಾವತಿ ಬಾಕಿ ಇದ್ದರೆ, ಸರಕಾರದ ಸಾಲ 203.94 ಲಕ್ಷ ರೂ.ಗಳಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗೆ ಪ್ರತಿ ತಿಂಗಳು 3.11 ಲಕ್ಷ ರೂ. ಮರು ಪಾವತಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಂಘವು ಪೆಟ್ರೋಲ್ ಬಂಕು ವ್ಯವಹಾರವನ್ನು ನಡೆಸುತ್ತಿದ್ದು, ಹುಣಸೂರು ಬಂಕ್‍ನಿಂದ 42.54 ಲಕ್ಷ ಮತ್ತು ಹೆಬ್ಬಾಲೆ ಬಂಕ್‍ನಿಂದ 14.12 ಲಕ್ಷ ಆದಾಯ ಬಂದಿದೆ. ಕಾಫಿ ಪುಡಿ ಮಾರಾಟ ವ್ಯವಹಾರದಲ್ಲಿ ಒಟ್ಟು 7486 ಕೆ.ಜಿ. ಕಾಫಿ ಪುಡಿ ಮಾರಾಟ ಮಾಡಿ 1.58 ಲಕ್ಷ ಲಾಭ ಗಳಿಸಲಾಗಿದ್ದರೆ, ಕಾಫಿ ಸಂಸ್ಕರಣಾ ವ್ಯವಹಾರದಿಂದ 3.68 ಲಕ್ಷ ಲಾಭ, ಜೇನು ಮಾರಾಟದಿಂದ 49 ಸಾವಿರ ಆದಾಯ ಹಾಗೂ ಸಂಘದ ಬಾಡಿಗೆ ಕಟ್ಟಡಗಳಿಂದ 103 ಲಕ್ಷ ರೂ. ಆದಾಯ ಗಳಿಸಿರುವುದಾಗಿ ತಿಳಿಸಿದರು.
ಮಹಾಸಭೆ :: ಕೊಡಗು ಕಾಫಿ ಬೆಳೆಗಾರರರ ಸಮಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.20 ರಂದು ಬೆಳಗ್ಗೆ 11 ಗಂಟೆಗೆ ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದರು. ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ಭಾರೀ ಮಳೆಯಿಂದ ಕಾಫಿ, ಕರಿಮೆಣಸು, ಏಲಕ್ಕಿ ಕೃಷಿಗೆ ಅಪಾರ ಹಾನಿಯಾಗಿದೆ. ಈ ಸಂದರ್ಭ ಅಗತ್ಯ ಸೂಕ್ತ ಸರ್ವೇ ಕಾರ್ಯ ನಡೆಸಿ ಪರಿಹಾರ ಬದಗಿಸುವಂತೆ ಸಂಸದ ಯದುವೀರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ನಾಪಂಡ ರವಿ ಕಾಳಪ್ಪ, ಚೆಟ್ರಂಡ ಲೀಲಾ ಮೇದಪ್ಪ, ಎಂ.ಎಂ.ಧರ್ಮಾವತಿ, ನಾಯಕಂಡ ಅಯ್ಯಣ್ಣ ಹಾಗೂ ವ್ಯವಸ್ಥಾಪಕ ನಾಣಯ್ಯ ಉಪಸ್ಥಿತರಿದ್ದರು.