ಮಡಿಕೇರಿ ನ 18 NEWS DESK : ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ ನಗರದ ಕೊಡಗು ವಿದ್ಯಾಲಯ ತಂಡವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ನಡೆದ ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ 8 ಸಿಬಿಎಸ್ಇ ಶಾಲೆಗಳ ಒಟ್ಟು 300 ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಸೈನಿಕ್ ಶಾಲೆ ಕೂಡಿಗೆ, ಜ್ಞಾನಗಂಗಾ ರೆಸಿಡೆನ್ಷಿಯಲ್ ಶಾಲೆ ಕುಶಾಲನಗರ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಎಸ್ಎಮ್ಎಸ್ ವಿದ್ಯಾಪೀಠ ಅರಮೇರಿ, ಅಂಕೂರು ಪಬ್ಲಿಕ್ ಶಾಲೆ ನಾಪೋಕ್ಲು, ಕುರುಂಜಿ ವೆಂಕಟರಮಣ ಪಬ್ಲಿಕ್ ಶಾಲೆ ಸುಳ್ಯ, ಕ್ರೆಸೆಂಟ್ ಶಾಲೆ ಮಡಿಕೇರಿ ಮತ್ತು ಆತಿಥೇಯ ಶಾಲೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದವು. ಪಂದ್ಯಾಟವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಮಿನ್ನಿ ಉಣ್ಣಿರಾಜ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತ ವ್ಯವಸ್ಥಾಪಕ ಪಿ.ರವಿ, ಶಿಕ್ಷಕರು ಮತ್ತು ತಂಡದ ಕೋಚ್ಗಳು ಹಾಜರಿದ್ದರು. ಕೊಡಗು ವಿದ್ಯಾಲಯವು ಪಂದ್ಯಾವಳಿಯಲ್ಲಿ ಚಾಂಪಿಯನ್ ಶಿಪ್ ಅನ್ನು ಗೆಲ್ಲುವ ಮೂಲಕ ಕ್ರೀಡಾ ಕೌಶಲ್ಯವನ್ನು ನಿರೂಪಿಸಿತು.
ಪಂದ್ಯಾವಳಿಯ ವಿಜೇತರು :: ಉಪಜೂನಿಯರ್ ಬಾಲಕ ವಿಭಾಗ : ಜಾರ್ಜ್ ಮೇಥ್ಯೂ (ಕೊಡಗು ವಿದ್ಯಾಲಯ) ಹಾಗೂ ನವನಿಕ (ನ್ಯಾಷನಲ್ ಅಕಾಡಮಿ ಶಾಲೆ) ), ಜೂನಿಯರ್ ಬಾಲಕ ಮತ್ತು ಬಾಲಿಕಾ ವಿಭಾಗ : ಎನ್.ಜಿ.ತನಿಷ್ ಮತ್ತು ಶೃಂಗಾ ಗಂಗಮ್ಮ (ಕೊಡಗು ವಿದ್ಯಾಲಯ), ಹೈಸ್ಕೂಲ್ ಬಾಲಕ ಮತ್ತು ಬಾಲಿಕಾ ವಿಭಾಗ : ವಿ.ಐ.ಇರ್ಶಾನ್ ಮತ್ತು ಎನ್.ಬಿ.ಹಿತಾ (ಕೊಡಗು ವಿದ್ಯಾಲಯ) ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಗಳನ್ನು ಗೆದ್ದು ಕೊಡಗು ವಿದ್ಯಾಲಯವು ಪ್ರಶಂಸೆಗೆ ಪಾತ್ರವಾಯಿತು.