ನಾಪೋಕ್ಲು ಸೆ.26 NEWS DESK : ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್.ಸುಧೀರ್ ಅಯ್ಯಪ್ಪ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ ಕವಿ ಸಭಾಂಗಣದಲ್ಲಿ ನಡೆದ ಆರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಪ್ರಸ್ತುತ 751 ಸದಸ್ಯರಿದ್ದು ಈ ವರ್ಷ ಸಂಘವು 3.1 0 ಲಕ್ಷ ರೂ. ಲಾಭಗಳಿಸಿದೆ. ಸಂಘವು ಅಭಿವೃದ್ಧಿಯಿಂದ ಸಾಗುತಿದ್ದು ಸಂಘದ ಏಳಿಗೆಗಾಗಿ ಸರ್ವ ಸದಸ್ಯರು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಚರ್ಚಿಸಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಬೊಳ್ಳಿಯಂಡ ಪಿ.ಹರೀಶ್ ಕಾರ್ಯಪ್ಪ, ಕನ್ನಂಬಿರ ಸಿ.ತಿಮ್ಮಯ್ಯ, ಕುಂಡ್ಯೋಳಂಡ.ಸಿ.ಪೂವಯ್ಯ, ಕಾಟುಮಣಿಯಂಡ ಎಂ.ಉಮೇಶ್, ಅರೆಯಡ ಎಂ.ಅಶೋಕ್, ಚೋಕಿರ ಎಸ್.ಚಿಣ್ಣಪ್ಪ, ಚೇನಂಡ.ಈ.ಗಿರೀಶ್ ಪೂಣಚ್ಚ, ಕುಲ್ಲೇಟಿರ ಎಂ.ದೇವಯ್ಯ, ಪಾಡೆಯಂಡ ಸಿ.ಕುಶಾಲಪ್ಪ, ಮೂವೆರ ರೇಖಾ ಪ್ರಕಾಶ್, ಕೋಟೆರ ನೈಲಾ ಚಂಗಪ್ಪ, ಮುಖ್ಯ ಕಾರ್ಯನಿರ್ವಾಹಕ ಎಸ್.ಪಿ.ದೇವಯ್ಯ, ಸಿಬ್ಬಂದಿಯಾದ ಕೆ.ಜಿ.ಸರಸ್ವತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕಿ ಕೋಟೆರ ನೈಲಾ ಚಂಗಪ್ಪ ಪ್ರಾರ್ಥಿಸಿದರು. ಉಪಾಧ್ಯಕ್ಷ ಬಾಳೆಯಡ ಎ.ಅಯ್ಯಪ್ಪ ಸ್ವಾಗತಿಸಿದರು. ನಿರ್ದೇಶಕ ಕರವಂಡ ಲವ ನಾಣಯ್ಯ ವಂದಿಸಿದರು.
ವರದಿ : ದುಗ್ಗಳ ಸದಾನಂದ.