ಮಡಿಕೇರಿ ಸೆ.26 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡಸ್೯ ಪ್ರಶಸ್ತಿಗಳನ್ನು ಮುಳ್ಳೂರು ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್.ಸತೀಶ್ ಮತ್ತು ನಾಪೋಕ್ಲು ರಾಮಟ್ರಸ್ಟ್ ನ ಶಿಕ್ಷಕಿ ಶೋಭಾಗೆ ಪ್ರದಾನ ಮಾಡಲಾಯಿತು. ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು. ಈ ಸಂದಭ೯ ಮಾತನಾಡಿದ ಸತೀಶ್, ಕೋವಿಡ್ ಸಂದಭ೯ದಲ್ಲಿ ಶಾಲಾ ವಿದ್ಯಾಥಿ೯ಗಳಿಗೆ ಅಟ್ಟಣಿಗೆ ನಿಮಿ೯ಸಿ ಮೊಬೈಲ್ ಸಿಗ್ನಲ್ ಸಿಗುವಂತೆ ಮಾಡಿ ಶಿಕ್ಷಣ ನೀಡಿದ್ದು, ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಕಾರಣವಾಯಿತು. ತನ್ನ ಸೇವೆಗೆ ಸಾವ೯ಜನಿಕರು ನೀಡುತ್ತಿರುವ ಶ್ಲಾಘನೆ ತನ್ನಲ್ಲಿ ಮತ್ತಷ್ಟು ಛಲವನ್ನು ತಂದಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಬೊಳ್ಳಚೆಟ್ಟೀರ ಶೋಭಾವಿಜಯ, ರೋಟರಿ ಮಿಸ್ಟಿ ಹಿಲ್ಸ್ ಶ್ರೀರಾಮಟ್ರಸ್ಟ್ ನಲ್ಲಿ ಮೊದಲು ಪ್ರಾರಂಭಿಸಿದ ಇಂಟರ್ಯಾಕ್ಟ್ ಕ್ಲಬ್ ನಿಂದಾಗಿ ವಿದ್ಯಾಥಿ೯ಗಳಲ್ಲಿ ಸಮಾಜಸೇವಾ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನೆರವಾಗಿದೆ. ನಾಯಕತ್ವ ಗುಣ ಬೆಳೆಸುವಲ್ಲಿ ಈ ಸಂಸ್ಥೆ ಸಹಕಾರಿಯಾಗಿದೆ. ವಿದ್ಯಾಥಿ೯ಗಳು ಮಾತ್ರವಲ್ಲದೇ ಶಿಕ್ಷಕ ವಗ೯ದಲ್ಲಿಯೂ ರೋಟರಿಯ ಸೇವಾ ಕಾಯ೯ಗಳು ಆದಶ೯ಪ್ರಾಯವಾಗಿದೆ ಎಂದರು. ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಹೆಚ್.ಟಿ.ಅನಿಲ್ , ಲೀನಾ ಪೂವಯ್ಯ ನಿವ೯ಹಿಸಿದರು. ಅಜಿತ್ ನಾಣಯ್ಯ ಸ್ವಾಗತಿಸಿ, ಬಿ.ಜಿ.ಅನಂತಶಯನ ವಂದಿಸಿದರು.