ಮಡಿಕೇರಿ NEWS DESK ಸೆ.26 : ಮಡಿಕೇರಿ ದಸರಾ ಜನೋತ್ಸವ ಹಿನ್ನಲೆ ಮತ್ತು ನಾಡಹಬ್ಬದ ಮಹತ್ವ ತಿಳಿಸುವ ಮಡಿಕೇರಿ ಜನೋತ್ಸವ ದಸರಾ ಕಾಫಿ ಟೇಬಲ್ ಪುಸ್ತಕವು ಸೆ 29 ರಂದು ಭಾನುವಾರ ಮಡಿಕೇರಿಯಲ್ಲಿ ಲೋಕಾಪ೯ಣೆಯಾಗಲಿದೆ. ದಸರಾ ಜನೋತ್ಸವದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಪತ್ರಕತ೯ ಅನಿಲ್ ಹೆಚ್ .ಟಿ ಪ್ರಕಟಿಸಿರುವ 132 ವಣ೯ಪುಟಗಳ ಸಂಗ್ರಹಯೋಗ್ಯ ಕೃತಿಯಾಗಿರುವ ಮಡಿಕೇರಿ ದಸರಾ ಜನೋತ್ಸವವನ್ನು ಸೆ 29 ರ ಭಾನುವಾರ ಸಂಜೆ 4 ಗಂಟೆಗೆ ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಲೋಕಾಪ೯ಣೆ ಮಾಡಲಿದ್ದಾರೆ, ಮಡಿಕೇರಿ ದಸರಾಕ್ಕೆ ರೂಪುರೇಷೆ ನೀಡಿದ್ದ ದಿ.ಭೀಮ್ ಸಿಂಗ್ ಅವರ ಪುತ್ರಿ ಶಾರದಾಭಾಯಿ ಮತ್ತು ಮಂಟಪಗಳಿಗೆ ವಿನೂತನ ವಿನ್ಯಾಸ ನೀಡಿದ್ದ ನಗರದ ಹಿರಿಯ ಶಿವರಾಮ್ ಶೆಟ್ಟಿ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಸನ್ಮಾನಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಎಂ ಪಿ ಸುಜಾಕುಶಾಲಪ್ಪ, ಮಾಜಿ ಸಚಿವ ಎಂ ಸಿ ನಾಣಯ್ಯ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ ಜಿ ಬೋಪಯ್ಯ, ಮಾಜಿ ಶಾಸಕ ಎಂ ಪಿ ಅಪ್ಪಚ್ಚು ರಂಜನ್, ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ , ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡಗು ಪೊಲೀಸ್ ವರಿಷ್ಟಾಧಿಕಾರಿ ಕೆ ರಾಮರಾಜನ್ , ಶಕ್ತಿ ಪತ್ರಿಕೆಯ ಸಂಪಾದಕ ಜಿ ಚಿದ್ವಿಲಾಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾಯ೯ಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿ ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ಬಿ ವೈ ರಾಜೇಶ್, ದಶಮಂಟಪ ಸಮಿತಿ ಅಧ್ಯಕ್ಷ ಜಗದೀಶ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಲೇಖಕ ಅನಿಲ್ ಮಾಹಿತಿ ನೀಡಿದ್ದಾರೆ.