ಮಡಿಕೇರಿ ಸೆ.28 NEWS DESK : ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ ರೂ. 2 ಸಾವಿರ ಗಳನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ. ಪ್ರಸ್ತುತ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನಗದು ಜಮೆಯಾಗದೇ ಐಟಿ ಮತ್ತು ಜಿಎಸ್‍ಟಿ ಪಾವತಿದಾರರೆಂದು ಅರ್ಜಿ ಸ್ಥಿತಿಯಲ್ಲಿ ಕಂಡು ಬಂದಿರುತ್ತದೆ. ಐಟಿ ಮತ್ತು ಜಿಎಸ್‍ಟಿ ಪಾವತಿದಾರರು ಹೊರತುಪಡಿಸಿ ಐಟಿ ಮತ್ತು ಜಿಎಸ್‍ಟಿಯಡಿ ಸೇರ್ಪಡೆಯಾಗದ ಫಲಾನುಭವಿಗಳಿಗೆ ನಗದು ಪಾವತಿಯಾಗದೇ ಸಮಸ್ಯೆ ಇದ್ದಲ್ಲಿ ಅಂತಹ ಫಲಾನುಭವಿಗಳು ತಮ್ಮ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳಾದ ಪಡಿತರಚೀಟಿ ಸಂಖ್ಯೆ, ಪಾನ್ ನಂಬರ್, ಆದಾಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ಜಿಎಸ್‍ಟಿ ಇಂದ ನೀಡಲಾದ ಔಡಿಜeಡಿ ಜಿoಡಿ ಛಿಚಿಟಿಛಿeಟ ಜಿoಡಿ ಖegisಣಡಿಚಿಣioಟಿ ಪತ್ರ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ ಪತ್ರ, ಅರ್ಜಿದಾರರ ಮನವಿ ಪತ್ರ ಸಲ್ಲಿಸಲು ಕ್ರಮವಹಿಸುವುದು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಮಡಿಕೇರಿ 08272-295087, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಸೋಮವಾರಪೇಟೆ 08276-200023 ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಪೊನ್ನಂಪೇಟೆ : 08274- 201878 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ ತಿಳಿಸಿದ್ದಾರೆ.