ಮಡಿಕೇರಿ NEWS DESK ಸೆ.30 : ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಅ.19 ಮತ್ತು 20 ರಂದು ನಗರದಲ್ಲಿ ಚೆಸ್ ತರಬೇತಿ ಮತ್ತು “ಮುಕ್ತ ರ‍್ಯಾಪಿಡ್ ಚೆಸ್ ಪಂದ್ಯಾವಳಿ”ಯನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಅಧ್ಯಕ್ಷ ಸುದಯ್ ನಾಣಯ್ಯ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತ ಮಾಹಿತಿ ನೀಡಿದ ಅವರು, ನಗರದ ಜೂನಿಯರ್ ಕಾಲೇಜಿನಲ್ಲಿ ಅ.19 ರಂದು 10 ವರ್ಷದೊಳಗಿನ ಮಕ್ಕಳಿಗೆ ಫಿಡೆ ಇನ್ ಸ್ಟ್ರಕ್ಟರ್ ಮತ್ತು ಫಿಡೆ ಆರ್ಬಿಟರ್ ಶ್ರೀಪದ್ ಕೆ.ವಿ. ಅವರು ಚೆಸ್ ತರಬೇತಿಯನ್ನು ನೀಡಲಿದ್ದಾರೆ ಎಂದರು. ಅ.20 ರಂದು ಚೆಸ್ ಪಂದ್ಯಾವಳಿಯು 10 ವರ್ಷದೊಳಗಿನ ವಿಭಾಗ, 16 ವರ್ಷದೊಳಗಿನ ವಿಭಾಗ ಮತ್ತು ಮುಕ್ತ ವಿಭಾಗಗಳಲ್ಲಿ ನಡೆಯಲಿದೆ. ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ 4 ಸಾವಿರ, ತೃತೀಯ 3500, ನಾಲ್ಕನೇ ಸ್ಥಾನ 3 ಸಾವಿರ, 5ನೇ ಸ್ಥಾನ 2500, 6ನೇ ಸ್ಥಾನ 2 ಸಾವಿರ, 7ನೇ ಸ್ಥಾನ 1500 ಮತ್ತು 8 ನೇ ಸ್ಥಾನ ಪಡೆಯುವವರಿಗೆ 1 ಸಾವಿರ ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ಉಳಿದ ಎರಡು ವಿಭಾಗಗಳಲ್ಲಿ ವಿಜೇತರಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು. ಮುಕ್ತ ವಿಭಾಗದಲ್ಲಿ ಸ್ಪರ್ಧಿಸುವವರಿಗೆ 500 ರೂ. ಹಾಗೂ 10 ಮತ್ತು 16 ವರ್ಷದೊಳಗಿನ ವಿಭಾಗಗಳಲ್ಲಿ ಸ್ಪರ್ಧಿಸುವವರಿಗೆ 400 ರೂ. ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತ ಸ್ಪರ್ಧಿಗಳು ‘ಸರ್ಕಲ್ ಚೆಸ್’ ವೆಬ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸ್ಥಳದಲ್ಲೆ ಹೆಸರು ನೋಂದಾವಣೆ ಇರುವುದಿಲ್ಲ. ಮೊದಲು ನೋಂದಾಯಿಸುವ 200 ಆಟಗಾರರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಚೆಸ್ ಪಂದ್ಯಾವಳಿ ಸಂಯೋಜಕರಾದ ಸಿ.ಟಿ.ಮಂದಣ್ಣ ಅವರು ಮಾತನಾಡಿ, ಪಂದ್ಯಗಳು ಸ್ವ್ವಿಸ್ ಲೀಗ್ ಮಾದರಿಯಲ್ಲಿ, ಅರ್ಧಗಂಟೆಗಳ ಅವಧಿಗೆ ಸೀಮಿತವಾಗಿ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಚೆಸ್ ಬೋರ್ಡ್ ಮತ್ತು ಗಡಿಯಾರವನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಪಂದ್ಯಾವಳಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಸಿ. ಕಾರ್ಯಪ್ಪ ಮೊ.9845006313, ಪ್ರಿನ್ಸ್ ಪೊನ್ನಣ್ಣ ಮೊ.9448217235 ಅವರನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ರೊಟೇರಿಯನ್ ಮತ್ತು ಯೂತ್ ಸರ್ವಿಸ್ ಡೈರೆಕ್ಟರ್ ಕೆ.ಸಿ. ಕಾರ್ಯಪ್ಪ ಹಾಗೂ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಉಪಸ್ಥಿತರಿದ್ದರು.