ಮಡಿಕೇರಿ NEWS DESK ಸೆ.30 : ಮಡಿಕೇರಿ ದಸರಾ ಕ್ರೀಡಾ ಸಮಿತಿ ವತಿಯಿಮದ ಐತಿಹಾಸಿಕ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.5, 6, 7 ಮತ್ತು 9 ರಂದು ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆಯೆಂದು ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅ.5 ರಂದು ಬೆಳಗ್ಗೆ 6.30 ಗಂಟೆಗೆ ರಸ್ತೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪುರುಷರಿಗೆ ಮತ್ತು ಮಹಿಳೆೆಯರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್‌ವರೆಗೆ, 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಜ.ತಿಮ್ಮಯ್ಯ ವೃತ್ತದಿಂದ ಆಸ್ಪತ್ರೆ ಗೇಟ್‌ವರೆಗೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಹೋಟೆಲ್ ಓಲ್ಡ್ ಈಸ್ಟ್ ಅಂಡ್‌ವರೆಗೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಪೋವರೆಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸುದರ್ಶನ್ ವೃತ್ತದವರೆಗೆ ರಸ್ತೆ ಓಟ ನಡೆಯಲಿದೆಯೆಂದು ತಿಳಿಸಿದರು. ಅಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರ ವಾಲಿಬಾಲ್ ಪಂದ್ಯಾವಳಿ, ಸಾರ್ವಜನಿಕ ಮುಕ್ತ ವಿಭಾಗದ ಫುಟ್ಬಾಲ್(5+2) ಪಂದ್ಯಾವಳಿ ನಡೆಯಲಿದೆ. ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಕ್ರೀಡಾಕೂಟ ಉದ್ಘಾಟನೆ- ಅ.6ರಂದು ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ ರಾಷ್ಟ್ರೀಯ ಮಟ್ಟದ ಜುಡೋ ಆಟಗಾರ್ತಿ ಕಾವೇರಿ ಅವರು ಬನ್ನಿ ಮಂಟಪದಿಂದ ಕ್ರೀಡಾ ಜ್ಯೋತಿಯನ್ನು ತರಲಿದ್ದಾರೆ, ಬಳಿಕ ಆಟೋಟ ಸ್ಪರ್ಧೆಗಳಿಗೆ ಚಾಲನೆ ದೊರಕಲಿದೆಯೆಂದರು. ಅಂದು ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಹಗ್ಗ ಜಗ್ಗಾಟ, ಥ್ರೋಬಾಲ್, ವಾಲಿಬಾಲ್, ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ನಿಧಾನ ಗತಿಯ ದ್ವಿಚಕ್ರ ವಾಹನ ಚಾಲನೆ ಸ್ಪರ್ಧೆಗಳು ನಡೆಯಲಿದೆ. ಇದರೊಂದಿಗೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.7 ರಂದು ದಸರಾ ಕ್ರೀಡಾ ಸಮಿತಿ ತಂಡ ಸೇರಿದಂತೆ ವಿವಿಧ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅ.9 ರಂದು ಗಾಂಧಿ ಮೈದಾನ ಬಳಿಯ ಹೋಟೆಲ್ ರಾಜ ದರ್ಶನ್ ಸಭಾಂಗಣದಲ್ಲಿ 9 ವರ್ಷ, 11, 14, 16 ವರ್ಷದೊಳಗಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮುಕ್ತ ಚೆಸ್ ಪಂದ್ಯಾವಳಿ ನಡೆಯಲಿದೆಯೆಂದು ತಿಳಿಸಿದರು. ಕ್ರೀಡಾ ಸಮಿತಿಯ ಪ್ರಮುಖರಾದ ಕಪಿಲ್ ಕುಮಾರ್ ಮಾತನಾಡಿ, ಅ.10 ರಂದು ಗಾಂಧಿ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಇದರಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ 12,500, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3 ಸಾವಿರ ನಗದು ಮತ್ತು ಟ್ರೊಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ.ಕಬಡ್ಡಿಯಲ್ಲಿ ಪಾಲ್ಗೊಳ್ಳ್ಳುವ ತಂಡಗಳಿಗೆ 1500 ರೂ. ಮೈದಾನ ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದೇ ಪ್ರಥಮ ಬಾರಿಗೆ ಮಹಿಳೆಯರಿಗೆ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಕರ್ಕೆರ ಮೊ.7338547897, ಕಪಿಲ್ ಕುಮಾರ್ ಮೊ.9731009841, ನಿರಂಜನ್ ಮೊ.9148045614, ದೇವರಾಜು ಮೊ.9448647161, ರವೂಫ್ ಮೊ.9141513187 ನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾ ಮಸಿತಿಯ ಗೌರವ ಸಲಹೆಗಾರರಾದ ದೇವರಾಜು(ಮಣಿ), ಸದಸ್ಯರುಗಳಾದ ಸುರ್ಜಿತ್, ನಿರಂಜನ್, ರವೂಫ್ ಉಪಸ್ಥಿತರಿದ್ದರು.