ಮಡಿಕೇರಿ NEWS DESK ಸೆ.30 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಅ.3 ರಿಂದ ಅ.12ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟಿ ಹಾಗೂ ಅಲಂಕಾರ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದಂಡಿನ ಮಾರಿಯಮ್ಮ ದೇವಾಲಯವು 94ನೇ ವರ್ಷದ ಅದ್ದೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹತ್ತು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ಹೇಳಿದರು. ಅ.3 ರಂದು ಬೆಳ್ಳಿಯ ಅಲಂಕಾರ, ಅ.4 ರಂದು ಹೂವಿನ ಅಲಂಕಾರ, ಅ.5 ರಂದು ಬೇವಿನ ಅಲಂಕಾರ, ಅ.6 ರಂದು ವಿಶೇಷ ಖಾದ್ಯ ಅಲಂಕಾರ, ಅ.7 ರಂದು ನಿಂಬೆ ಹಣ್ಣಿನ ಅಲಂಕಾರ, ಅ.8 ರಂದು ಮಹಾಲಕ್ಷ್ಮಿ ಅಲಂಕಾರ, ಅ.9 ರಂದು ಶಾರದ ದೇವಿಯ ಅಲಂಕಾರ, ಅ.10 ರಂದು ಬಳೆಯ ಅಲಂಕಾರ, ಅ.11 ರಂದು ಹಣ್ಣಿನ ಅಲಂಕಾರ, ಅ.12 ರಂದು ವಜ್ರದ ಅಲಂಕಾರ ನಡೆಯಲಿದೆ ಎಂದರು. ಅ.3 ರಂದು ಕರಗ, ಅ.4 ರಂದು ದುರ್ಗಾ ಹೋಮ, ಅ.8 ರಂದು ಕಲ್ಪೋಕ್ತ ಪೂಜೆ, ಅ.9 ರಂಗ ಪೂಜೆ, ಅ.10 ರಂದು ದುರ್ಗಾ ದೀಪ ನಮಸ್ಕಾರ, ಅ.11 ಆಯುಧ ಪೂಜೆ ಮಾಡಲು ಇಚ್ಚಿಸುವ ಭಕ್ತಾಧಿಗಳು ಉಮೇಶ್ 9448005694, ನಾಗರಾಜ್ 8317484605, ಸಿ.ಎಸ್.ರಂಜಿತ್ ಕುಮಾರ್ 9886976306, ಎಂ.ಎಲ್.ಸತೀಶ್ ಕುಮಾರ್ 8792432414 ಸಂಪರ್ಕಿಸಬಹುದಾಗಿದೆ ಎಂದು ಎಂದು ತಿಳಿಸಿದರು. ಶ್ರೀ ದಂಡಿನ ಮಾರಿಯಮ್ಮನ ಸೇವೆಯು ಸುಮಾರು 900 ವರ್ಷಗಳ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವಿಯಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಭಕ್ತಾಧಿಗಳಿಂದ ಪೂಜಿಸಲ್ಪಡುತ್ತಾ ಬಂದಿದೆ. ಇದೀಗ 94ನೇ ವರ್ಷದ ಅದ್ದೂರಿ ದಸರಾ ಉತ್ಸವ ನಡೆಯುತ್ತಿದ್ದು, 9 ದಿನಗಳ ಕಾಲ ಕರಗ ಉತ್ಸವ ನಡೆಯಲಿದೆ. ನಗರದ ಹಲವು ಬೀದಿಗಳಿಗೆ ಕರಗ ಪ್ರದಕ್ಷಿಣೆ ಮಾಡಿ ಭಕ್ತಾಧಿಗಳಿಗೆ ಆಶೀರ್ವಾದ ನೀಡಿ ಪ್ರಖ್ಯಾತಿಯನ್ನು ಹೊಂದಿದೆ. ನವರಾತ್ರಿಯ ಕೊನೆಯ ದಿನವಾದ ಅ.12 ರಂದು ವಿಜಯದಶಮಿಯ ಅಂಗವಾಗಿ ವಿಶೇಷ ಭವ್ಯ ವಿದ್ಯುತ್ ಅಲಂಕಾರ ಮಂಟಪ ಹಾಗೂ ವಾದ್ಯಗೋಷ್ಟಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದರು. ಉತ್ಸವವನ್ನು ವಿಜ್ರಂಭಣೆಯಿಂದ ನಡೆಸಲು ಮತ್ತು ಬಹುಮಾನವನ್ನು ತನ್ನದಾಗಿಸಿಕೊಳ್ಳಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ ಎಂದು ಸತೀಶ್ ಕುಮಾರ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಹಾಗೂ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತೀಶ್, ಟ್ರಸ್ಟಿ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಟಿ.ಹೆಚ್.ಉದಯ ಕುಮಾರ್, ಜೆಮ್ಸ್ ಉಪಸ್ಥಿತರಿದ್ದರು.